ಸುದ್ದಿ

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ.ಇದರ ಮಹಾಸಭೆ…

ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ.ಇದರ ವಾರ್ಷಿಕ ಮಹಾಸಭೆ ನ.24 ರಂದು ಮಂಗಳವಾರ ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅವರು ಮಾತನಾಡಿ ಸಂಘ ಈ‌ವರ್ಷ 13.33 ಕೋಟಿ ರೂ ವ್ಯವಹಾರ ನಡೆಸಿದೆ. 17.27 ಲಕ್ಷ ರೂ ಲಾಭ ಗಳಿಸಿದ್ದು 20/ ಡಿವಿಡೆಂಡ್ ಸದಸ್ಯರಿಗೆ ನೀಡುತ್ತೇವೆ ಎಂದು ತಿಳಿಸಿದರು.
ಸಂಘದಲ್ಲಿ 28 ಎ.ವರ್ಗದ ಸದಸ್ಯರು, 125 ಬಿ.ವರ್ಗದ ಸದಸ್ಯರು ಹಾಗೂ 3863 ಸಿ.ವರ್ಗದ ಸದಸ್ಯರು ಸದಸ್ಯತ್ವ ಹೊಂದಿದ್ದಾರೆ .ಸಹಕಾರಿ ಸಂಘ ಪ್ರತಿವರ್ಷ ಸದಸ್ಯರಿಗೆ ಕ್ಷೇಮ ನಿಧಿ, ಸಹಕಾರಿ ಶಿಕ್ಷಣಾ ನಿಧಿ, ಲಾಭಾಂಶ ಸಮೀಕರಣ ನಿಧಿ, ಕಟ್ಟಡ ನಿಧಿ, ಪಾಲು ಸಮೀಕರಣ ನಿಧಿ, ಬೆಲೆ ಏರಿಳಿತ ನಿಧಿ, ವೇತನ ಸಮೀಕರಣ ನಿಧಿ, ನೌಕರರಿಗೆ 2 ತಿಂಗಳ ಸಂಬಳ(ಬೋನಸ್) ಕೂಲಿಯಾಳುಗಳ ಹಬ್ಬ ದ ಕೊಡುಗೆ, ಡಿವಿಡೆಂಡ್ ನೀಡುತ್ತಿದ್ದೇವೆ. ಸದಸ್ಯರ ಸಹಕಾರ ಮತ್ತು ಗ್ರಾಹಕರ ಪ್ರೋತ್ಸಾಹದಿಂದ ಸಂಘದ ಬೆಳವಣಿಗೆಗೆ ಕಾರಣವಾಯಿತು. ಸಂಘದ ಸಿಬ್ಬಂದಿ ಗಳ ಪ್ರಾಮಾಣಿಕ ಸೇವೆ ಕೂಡ ಅತ್ಯಂತ ಪ್ರಮುಖವಾಗಿದೆ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಸಹಾಯದಿಂದ ಪೆಟ್ರೋಲಿಯಂ ಉತ್ಪನ್ನ ಮಾರಾಟ ಕೇಂದ್ರ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಯೋಜನೆ ಸಿದ್ದಪಡಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ ಉಡುಪ, ಸದಸ್ಯರಾದ ಉಮೇಶ್ ಪೂಜಾರಿ, ರಾಜೇಶ್ ಶೆಟ್ಟಿ, ಜ್ಞಾನೇಶ್ವರ ಪ್ರಭು, ವೆಂಕಟರಾಯ ಪ್ರಭು, ಮನೋರಾಜ್ ಎ. ಪಿ.ವೆಂಕಟೇಶ ನಾವಡ, ರೋಹಿನಾಥ ಕೆ.ಬಿ.ಟಿ.ನಾರಾಯಣ ಭಟ್, ಸುಂದರ ಭಂಡಾರಿ, ಪದ್ಮನಾಭ ಕಿದೆಬೆಟ್ಟು, ರತ್ನ, ಪೂವಪ್ಪ, ರಾಮನಾಯ್ಕ ಉಪಸ್ಥಿತರಿದ್ದರು.
ಅಧ್ಯಕ್ಷ ರವೀಂದ್ರ ಕಂಬಳಿ ಸ್ವಾಗತಿಸಿ, ಸದಸ್ಯ ಬಿ.ಟಿ.ನಾರಾಯಣ ಭಟ್ ವಂದಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ಕಾರ್ಯಕ್ರಮ ನಿರೂಪಿದರು.

Related Articles

Leave a Reply

Your email address will not be published.

Back to top button