ಮೂರ್ತೆದಾರರ ಸಹಕಾರಿ ಮಹಾ ಮಂಡಲ – ಮಹಾಸಭೆ…
ಬಂಟ್ವಾಳ : ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾ ಮಂಡಲ ಬಿ.ಸಿ.ರೋಡ್ ಮುಂದಿನ ಆರ್ಥಿಕ ವರ್ಷಕ್ಕೆ ಜಿಲ್ಲೆಯ 29 ಸಹಕಾರಿ ಸಂಘಗಳ ನೆರವಿನಲ್ಲಿ ಹೊಸ ಕಟ್ಟಡ ನಿರ್ಮಿಸುವ ಗುರಿ ಹೊಂದಿದೆ ಎಂದು ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಹೇಳಿದರು.
ಅವರು ಡಿ. 25ರಂದು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ನಡೆದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯ ಬೆಳವಣಿಗೆ ಪ್ರಗತಿಯಲ್ಲಿದ್ದು ಮುಂದಿನ ಆರ್ಥಿಕ ವರ್ಷಗಳಲ್ಲಿ ಸಂಘದ ಇತರ ವರ್ಗದ ಸದಸ್ಯರಿಗೆ ಸಾಲ ವಿತರಣೆಯಲ್ಲಿ ಪ್ರಗತಿ ಸಾಧನೆ ಗುರಿ ಹೊಂದಿದ್ದನ್ನು ಸಭೆಯಲ್ಲಿ ವಿವರಿಸಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್ ಕುಮಾರ್ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿ ಸರ್ವಾನುಮತದಿಂದ ಅನುಮೋದಿಸಲಾಯಿತು.
ಈ ಸಭೆಯಲ್ಲಿ ಉಪಾಧ್ಯಕ್ಷ ಶಿವಪ್ಪ ಸುವರ್ಣ, ನಿರ್ದೇಶಕರುಗಳಾದ ವಿಜಯ ಕುಮಾರ್ ಸೊರಕೆ, ಅಣ್ಣಿ ಯಾನೆ ನೋಣಯ್ಯ ಪೂಜಾರಿ, ಲಕ್ಷ್ಮಣ ಕೋಟ್ಯಾನ್, ಬಿ.ವಿಶ್ವನಾಥ್, ರಾಜೇಶ್ ಸುವರ್ಣ, ಆರ್.ಸಿ. ನಾರಾಯಣ, ವಿಶ್ವನಾಥ ಕೆ., ಪ್ರತಿಮ ಅಂಚನ್, ಪುಷ್ಪಾವತಿ, ವಿಶ್ವನಾಥ ಪೂಜಾರಿ ಪಂಜ ಉಪಸ್ಥಿತರಿದ್ದರು. ನಿರ್ದೇಶಕ ಬೇಬಿ ಕುಂದರ್ ವಂದಿಸಿದರು.