ನರಿಕೊಂಬು ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ – ವ್ಯಾಯಾಮ ಶಾಲೆ, ಸಭಾಭವನ ಲೋಕಾರ್ಪಣೆ…

ಬಂಟ್ವಾಳ:ನರಿಕೊಂಬು ಗ್ರಾಮದ ಶ್ರೀ ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.) ಮಾರುತಿನಗರ ನರಿಕೊಂಬು ವತಿಯಿಂದ ನೂತನವಾಗಿ ನಿರ್ಮಿಸಿದ ವ್ಯಾಯಾಮ ಶಾಲೆ ಹಾಗೂ ಸಭಾಭವನ ಲೋಕಾರ್ಪಣೆ ವೇ.ಮೂ. ರಾಜಗೋಪಾಲಾಚಾರ್ಯ ನರಿಕೊಂಬು ರವರ ಪೌರೋಹಿತ್ಯದಲ್ಲಿ ನಡೆಯಿತು.
ವ್ಯಾಯಾಮಶಾಲೆ ಹಾಗೂ ನೂತನ ಸಭಾಭವನವನ್ನು ಲೋಕಾರ್ಪಣೆ ಮಾಡಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಹಿಳೆಯರು ಜಾಗ್ರತೆ ಆದರೆ ಒಂದು ಮನೆ ಬೆಳಗಿದಂತೆ. ನಾವು ನಮ್ಮದು ಎನ್ನುವುದೇ ನಿಜವಾದ ಭಾರತೀಯತೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಉತ್ತಮ ಸಂಸ್ಕಾರ ಕಲಿಸುವ ತಾಣಗಳಾಗಲಿ ಎಂದು ಶುಭಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲೋಟಸ್ ಗ್ರೂಪ್ ಮಂಗಳೂರಿನ ಜಿತೇಂದ್ರ ಎಸ್. ಕೊಟ್ಟಾರಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮುದಾಯ ಭವನವನ್ನು ವೇ.ಮೂ. ಜನಾರ್ದನ ವಾಸುದೇವ ಭಟ್ ಉದ್ಘಾಟಿಸಿದರು . ಎರಕಳ ದಿ.ಬಿ. ಗಣೇಶ ಸೋಮಯಾಜಿ ವೇದಿಕೆಯನ್ನು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ಪಾಣೆಮಂಗಳೂರಿನ ಆಡಳಿತ ಮುಖ್ಯಸ್ಥರಾದ ಬಿ. ರಘುನಾಥ ಸ್ವಾಮೀಜಿ ಅನಾವರಣ ಗೊಳಿಸಿದರು.
ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ವೀರ ಮಾರುತಿ ವ್ಯಾಯಾಮ ಶಾಲೆಯ ಇಬ್ಬರು ಸದಸ್ಯರುಗಳನ್ನು ದೇವಸ್ಥಾನದ ಟ್ರಸ್ಟಿಗಳಾಗಿ ನೇಮಿಸುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ವರ್ತಮಾನದ ಸಮಾಜದಲ್ಲಿ ಕೃತಜ್ಞತೆ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ವ್ಯಾಯಾಮ ಶಾಲೆಯ ಅಭಿವೃದ್ಧಿಗೆ ದುಡಿದ ಹಿರಿಯ ಸದಸ್ಯರಾದ ಆನಂದ ನಾಯ್ಕ್ , ಅಶೋಕ್ ಟೈಲರ್ , ಬಾಬು ಪೂಜಾರಿ,ಕೃಷ್ಣಪ್ಪ ಡ್ರೈವರ್, ಮೋಹನ ಆಚಾರ್ಯ , ಮಂಜುನಾಥ ನಾಯ್ಕ್ , ಸುಕೀರ್ತಿ ಜೈನ್ ಮಾಣಿಮಜಲು, ಜಯಾನಂದ ಸಫಲ್ಯ ಬಂಟ್ವಾಳ, ಪುರುಷೋತ್ತಮ ಎಸ್., ಸದಾನಂದ ಪೂಜಾರಿ ,ಪದ್ಮನಾಭ ಸಫಲ್ಯ ,ಪ್ರಭಾಕರ ಪೂಜಾರಿ , ಸುಬ್ಬಣ್ಣ ನಾಯ್ಕ್, ಕ್ರೀಡಾಪಟು ಸಂತೋಷ ಮಾಣಿಮಜಲು ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಕುಮಾರ್, ,ಜಗನಾಥ ಬಂಗೇರ ನಿರ್ಮಾಲ್, ಪದ್ಮನಾಭ ಮಯ್ಯ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಹರೀಶ ಪುತ್ರೋಟಿ ಬೈಲು, ಪಂಚಾಯತ್ ಸದಸ್ಯರುಗಳಾದ ಪ್ರಕಾಶ ಕೋಡಿಮಜಲು, ಶುಭ ಶಶಿಧರ, ವೀರಮಾರುತಿ ವ್ಯಾಯಮ ಶಾಲೆ ಟ್ರಸ್ಟ್ (ರಿ.) ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಮಹಿಳಾ ಮಂಡಳಿ ಆಧ್ಯಕ್ಷೆ ಅನಿತಾ ಜೆ.ಮೊದಲಾದವರು ಉಪಸ್ಥಿತರಿದ್ದರು. ಹಂಸಿನಿ ,ಮೋನಿಷಾ ಪ್ರಾರ್ಥಿಸಿದರು. ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಮಾಣಿಮಜಲು ಸ್ವಾಗತಿಸಿ, ಕೋಶಾಧಿಕಾರಿ ಯಾದವ ಪ್ರಾಸ್ತಾವಿಕ ಮಾತನಾಡಿದರು.ನಯನ ಯಾದವ ವಂದಿಸಿ, ರಾಜೇಜ್ ಕೊಟ್ಟಾರಿ ಕಲ್ಲಡ್ಕ ನೀರೂಪಿಸಿದರು.

whatsapp image 2024 01 08 at 2.18.22 pm

Sponsors

Related Articles

Back to top button