ಸುದ್ದಿ

ವೀರಕಂಭದ ಬೊಣ್ಯಕುಕ್ಕು ಅರಣ್ಯ ಪ್ರದೇಶದಲ್ಲಿ ಬಿತ್ತೋತ್ಸವ-2022 ಕಾರ್ಯಕ್ರಮ…

ಬಂಟ್ವಾಳ: ಬಂಟ್ವಾಳ ಅರಣ್ಯ ಇಲಾಖೆ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಕಂಭ ಗ್ರಾಮ ಅರಣ್ಯ ಸಮಿತಿ ಸಹಯೋಗದೊಂದಿಗೆ ಬಿತ್ತೋತ್ಸವ-2022 ಕಾರ್ಯಕ್ರಮ ವೀರಕಂಭದ ಬೊಣ್ಯಕುಕ್ಕು ಅರಣ್ಯ ಪ್ರದೇಶದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ, ಸರಕಾರದ ಆದೇಶದಂತೆ ಎಲ್ಲಡೆ ಬಿತ್ತೋತ್ಸವದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಬಂಟ್ವಾಳದಲ್ಲೂ ಶಾಲಾ ಕಾಲೇಜುಗಳು, ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳ ಖಾಲಿ ಜಾಗಗಳಲ್ಲಿ ಹಣ್ಣಿನ ಬೀಜಗಳ ಬಿತ್ತನೆ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ವೀರಕಂಭದ ಬೊಣ್ಯಕುಕ್ಕು ಪ್ರಸ್ತುತ ಸುಮಾರು 40 ಕೆ.ಜಿ. ಹಣ್ಣಿನ ಬೀಜಗಳನ್ನು ಬಿತ್ತಲಾಗಿದ್ದು, ಈ ಹಿಂದೆ ಬಿತ್ತಿದ ಬೀಜಗಳು ಗಿಡವಾಗಿ ಬೆಳೆದಿದೆ ಎಂದರು.
ವೀರಕಂಭ ಗ್ರಾಮ ಅರಣ್ಯ ಸಮಿತಿ ಸದಸ್ಯ ವಿಶ್ವನಾಥ್ ಎಂ. ಮಾತನಾಡಿ, ಬೊಣ್ಯಕುಕ್ಕು ಪ್ರದೇಶದಲ್ಲಿದ್ದ ಅಕೇಶಿಯಾ ಮರಗಳನ್ನು ಅರಣ್ಯ ಇಲಾಖೆಯು ಸರಕಾರದ ಆದೇಶದಂತೆ ಕಡಿದಿದ್ದು, ಪ್ರಸ್ತುತ ಇಲ್ಲಿನ ಖಾಲಿ ಜಾಗದಲ್ಲಿ ಹಣ್ಣಿನ ಬೀಜಗಳನ್ನುಬಿತ್ತಲಾಗುತ್ತಿದೆ. ಗ್ರಾಮ ಅರಣ್ಯ ಸಮಿತಿಯ ವತಿಯಿಂದ ಸುಮಾರು 40 ಕೆಜಿ ಹಲವು, ಮಾವು ಮೊದಲಾದ ಬೀಜಗಳನ್ನು ಸಂಗ್ರಹಿಸಿ ಬಿತ್ತಲಾಗುತ್ತಿದೆ ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ವೀರಕಂಭ ಪಂಚಾಯತ್ ಸದಸ್ಯ ಜಯಪ್ರಸಾದ್ ಶೆಟ್ಟಿ ಕಲ್ಮಲೆ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್ ಬಾಯಿಲ, ಉಪವಲಯ ಅರಣ್ಯಾಽಕಾರಿ ಪ್ರೀತಮ್ ಎಸ್, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ನೋಣಯ್ಯ ಮಜಿ, ಅರಣ್ಯ ರಕ್ಷಕರಾದ ಶೋಭಿತ್, ದಯಾನಂದ, ಅನಿತಾ, ವೀಕ್ಷಕರಾದ ಪ್ರವೀಣ್, ಜಯರಾಮ ಉಪಸ್ಥಿತರಿದ್ದರು.

Related Articles

Back to top button