ಸುದ್ದಿ

ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಬಿ ಕೆ ಹರಿಪ್ರಸಾದ್ ರವರ ಶಾಸಕರ ನಿಧಿಯಿಂದ ರೂ. 5 ಲಕ್ಷ ಮಂಜೂರಾತಿ…

ಸುಳ್ಯ: ಸಂಪಾಜೆ ಗ್ರಾಮದ ಮೂರನೇ ವಾರ್ಡ್ ದರ್ಕಾಸ್ ಹಿಲ್ ರೋಡ್ ನಿವಾಸಿಗಳ ಕೋರಿಕೆಯ ಮೇರೆಗೆ ಈಗಾಗಲೇ ತೆಕ್ಕಿಲ್ ಪ್ರತಿಷ್ಠಾನ (ರಿ) ಅಧ್ಯಕ್ಷರು, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಜನಾಬ್ ಟಿ ಎಂ ಶಾಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ಮಲೆನಾಡು ಪ್ರದೇಶ ಅಭಿವೃದಿ ನಿಧಿಯಿಂದ ಐದು ಲಕ್ಷ ರೂಪಾಯಿಯನ್ನು ಸಚಿವರಾದ ಎಸ್ ಆರ್ ಪಾಟೀಲ್ ರವರಿಂದ ಅನುದಾನ ಬಿಡುಗಡೆಗೊಂಡು ಕಾಮಗಾರಿ ಪೂರ್ಣಗೊಡಿರುತ್ತದೆ.
ಹಿಲ್ ರೋಡ್ ಮುಂದುವರಿದ ಭಾಗದ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಹಿಲ್ ರೋಡ್ ನಿವಾಸಿಗಳು ಟಿ ಎಂ ಶಾಹೀದ್ ತೆಕ್ಕಿಲ್ ರವರಿಗೆ ಸಲ್ಲಿಸಿದ ಮನವಿಯ ಮೇರೆಗೆ AICC ಮಾಜಿ ಪ್ರಧಾನ ಕಾರ್ಯದರ್ಶಿ ಹಾಗು ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಬಿ ಕೆ ಹರಿಪ್ರಸಾದ್ ರವರ ಶಾಸಕರ ನಿಧಿಯಿಂದ ಐದು ಲಕ್ಷ ರೂಪಾಯಿ ಮಂಜೂರಾತಿ ಮಾಡಿಕೊಟ್ಟಿದ್ದಾರೆ. ತಕ್ಷಣವೇ ಮಂಜೂರಾತಿ ಮಾಡಿಕೊಟ್ಟ ಬಿ ಕೆ ಹರಿಪ್ರಸಾದ್ ರವರಿಗೆ, ಮುತುವರ್ಜಿ ವಹಿಸಿ ತಕ್ಷಣ ಮಂಜೂರಾತಿ ಮಾಡಲು ಸಹಕರಿಸಿದ ತೆಕ್ಕಿಲ್ ಪ್ರತಿಷ್ಠಾನ (ರಿ) ಅಧ್ಯಕ್ಷ ಟಿ ಎಂ ಶಾಹೀದ್ ತೆಕ್ಕಿಲ್ ಅವರಿಗೆ ಮತ್ತು ಇದಕ್ಕೆ ಮುತುವರ್ಜಿ ವಹಿಸಿದ ಹಿಲ್ ರೋಡ್ ನಿವಾಸಿಗಳಿಗೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿ ಕೆ ಅಬುಶಾಲಿ ಗೂನಡ್ಕ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Back to top button