ಸುದ್ದಿ

ರೋಟರಿ ಕ್ಲಬ್ ಬಂಟ್ವಾಳ ಮತ್ತು ಮೊಡಂಕಾಪು ಆಶ್ರಯದಲ್ಲಿ ರಕ್ತದಾನ ಶಿಬಿರ…

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಮೊಡಂಕಾಪು ಹಾಗು ಇತರ ಸಂಸ್ಥೆಗಳ ಜಂಟಿ ಆಶ್ರಯದೊಂದಿಗೆ ಬೃಹತ್ ರಕ್ತದಾನ ಶಿಬಿರ ಮತ್ತು ನೇತ್ರದಾನ ಮಾಹಿತಿ ಶಿಬಿರವನ್ನು ಶ್ರೀ ದೇವಿ ಭಜನಾ ಮಂದಿರದಲ್ಲಿ ನಡೆಸಲಾಯಿತು.
ರಕ್ತದಾನಿಗಳಿಂದ 50 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದ್ದು, 25 ಜನರು ಕಣ್ಣು ಹಾಗೂ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ರೋಟರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಅಸಿಸ್ಟಂಟ್ ಗವರ್ನರ್ ಮಂಜುನಾಥ್ ಆಚಾರ್ಯ ಹಾಗೂ ಇಲ್ಯಾಸ್ ಮತ್ತು Rtn ಪ್ರಕಾಶ್ ಬಾಳಿಗ,Rtn ಸದಾಶಿವ ಬಾಳಿಗ , ಕ್ಲಬ್ ಸೆಕ್ರೆಟರಿ ಭಾನುಶಂಕರ್ ಬನ್ನಿಂತಾಯ, ರಮ್ಯಾ ಭಾನುಶಂಕರ್ ಬನ್ನಿಂತಾಯ, ಮೊಡಂಕಾಪು ಕ್ಲಬ್ ಅಧ್ಯಕ್ಷರಾದ ಗೋವರ್ಧನ್ ಹಾಗೂ ಸೆಕ್ರೆಟರಿ ರಹೀಂ ಭಾಗವಹಿಸಿದ್ದರು.

Related Articles

Back to top button