ಸುದ್ದಿ

ಮೈಸೂರು ಮೂಲದ ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಸಹಕರಿಸಿದ ನ.ಪಂ ಸದಸ್ಯ ರಿಯಾಝ್ ಕಟ್ಟೆಕ್ಕಾರ್…

ಸುಳ್ಯ: ಸುಬ್ರಮಣ್ಯಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವೃದ್ಧ ದಂಪತಿಗಳಿಗೆ ಮರಳಿ ಊರಿಗೆ ತೆರಳಲು ಹಣವಿಲ್ಲದೆ ಸುಳ್ಯ ಬಸ್ ನಿಲ್ದಾಣದಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತಿ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ರವರು ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ರಿಯಾಜ್ ಕಟ್ಟೆಕ್ಕಾರ್ ಅವರು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಶೌಚಾಲಯದ ಸ್ವಚ್ಛತೆಯ ಕೆಲಸಕ್ಕೆ ಬಂದಿದ್ದ ವೃದ್ಧ ದಂಪತಿಗಳು ಕೆಲಸ ಅರಸಿ ಬಂದಿದ್ದ ಸ್ಥಳದಲ್ಲಿ ಬೇರೆಯವರನ್ನು ನೇಮಿಸಿದ್ದ ಕಾರಣ ಇವರಿಗೆ ಕೆಲಸ ಸಿಕ್ಕಲು ಸಮಸ್ಯೆ ಉಂಟಾಗಿತ್ತು. ಮರಳಿ ಊರಿಗೆ ತೆರಳಲು ಹಣವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ರಿಯಾಝ್ ಕಟ್ಟೆಕ್ಕಾರ್ ರವರ ಈ ಕಾರ್ಯ ವೃದ್ಧ ದಂಪತಿಗಳಿಗೆ ನೆರವಾಗಿದೆ.

Related Articles

Leave a Reply

Your email address will not be published.

Back to top button