ರಾಣೇಬೆನ್ನೂರು ಭಾರತೀಯ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಪುಸ್ತಕ ಜೋಳಿಗೆ ಅಭಿಯಾನ…

ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಳ- ಬಾಗೇವಾಡಿಮಠ...

ರಾಣೇಬೆನ್ನೂರು: ಜೂ. 2. ಇವತ್ತಿನ ದಿನಮಾನಗಳಲ್ಲಿ ಸಾಮಾನ್ಯ ಜ್ಞಾನವನ್ನು ಸಂಪಾದಿಸುವುದೆ ಪುಸ್ತಕಗಳಿಂದ. ನಾವುಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ನಮ್ಮಲ್ಲಿರುವ ದುಃಖ ಸಂಕಷ್ಟಗಳನ್ನು ದೂರ ಮಾಡುವ ಶಕ್ತಿ ಪುಸ್ತಕಕ್ಕೆ ಇರುತ್ತದೆ ಹಾಗೂ ಅನೇಕ ಶಬ್ದ-ಕೋಶ ಚಿತ್ರಣವನ್ನು ಇನ್ನೂ ಆಧರಿತ ವಿಷಯಗಳನ್ನು ಮಾಡಲ್ಪಟ್ಟಿರುವುದೆ ನಮ್ಮ ಹೆಮ್ಮೆಯ ದೇವತಿ ಪುಸ್ತಕ ನಮ್ಮ ಜ್ಞಾನ ಜೋಳಿಗೆ ನಮ್ಮ ಮನದಲ್ಲಿ ತುಂಬಿರಬೇಕು.ಹಳೆಯ ಪುಸ್ತಕ ಸಂಗ್ರಹ ಅಭಿಯಾನ ಪುಸ್ತಕ ಓದುಗರಿಗೆ ವ್ಯವಸ್ಥೆ ಮಾಡುತ್ತಾ ಬಂದಿದೆ ಎಂದು ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ, ಸಂಸ್ಥಾಪಕರಾದ ಬಸವರಾಜ ಬಾಗೇವಾಡಿಮಠವರು ಹೇಳಿದರು.
ರಾಣೇಬೆನ್ನೂರು ನಗರದ ಸಿದ್ದೇಶ್ವರ ನಗರದಲ್ಲಿರುವ ಭಾರತಿಯ ವಿದ್ಯಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಯಲಕ್ಕೆ ಅಭಿಯಾನದಿಂದ ಸಂಗ್ರಹಿಸಿದ ಪುಸ್ತಕಗಳನ್ನು ಸಮರ್ಪಿಸಿ ಮಾತನಾಡಿದರು. ತಾವು ಕವಿಯಾಗಿದ್ದು, ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು, ಕನ್ನಡ ನುಡಿ ಮತ್ತು ಸಾಹಿತ್ಯ ಅಧ್ಯಯನದಲ್ಲಿ ತೋಡಗಿಸಿ ಕೊಂಡಿದ್ದೇನೆ. ಪ್ರಸ್ತುತ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವ್ಯಾಟ್ಸಪ್, ಪೇಸ್ ಬುಕ್, ಟೆಲಿಗ್ರಾಫ್, ಇನ್ಸ್ಟಾಗ್ರಾಮ್ ವ್ಯವಸ್ಥೆಯಲ್ಲಿ ನಮ್ಮ ವಿದ್ಯಾರ್ಥಿಗಳು ನೈಜ ಓದುವಿಕೆಯನ್ನು ಮರೆತುಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅತ್ಯಂತ ಅಮೂಲ್ಯವಾದ ಗ್ರಂಥಗಳನ್ನು ಸಂಗ್ರಹಿಸಿ ಅವುಗಳನ್ನು ಕೊಡುಗೆಯಾಗಿ ನೀಡುವ ಸೇವಾ ಕಾರ್ಯವನ್ನು ಮಾಡುತ್ತಿದ್ದೇನೆ ಇದರಲ್ಲಿ ಯಾವುದೇ ರೀತಿಯ ಸ್ವಾರ್ಥವಿಲ್ಲ ಎಂದು ಹೇಳಿದರು.
ಪುಸ್ತಕಗಳನ್ನು ಸ್ವೀಕರಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷರಾದ ಆನಂದ ಮಠದ ಅವರು ಸಮಾಜ ಸೇವೆ ಮಾಡುವುದರಲ್ಲಿ ಅನೇಕ ಕಷ್ಟ ನೋವುಗಳು, ಲೋಪ ದೋಷಗಳು ಬರುವುದು ಸಹಜ ಎಲ್ಲವನ್ನೂ ಧೈರ್ಯದಿಂದ ಹೆದರಿಸಿ ಮುಂದೆ ಬಂದು ಒಬ್ಬ ಕವಿಯಾಗಿ, ಸಾಹಿತಿ, ಲೇಖಕಯಾದರು ಬಸವರಾಜರವರು ಇವರು ಮಾಡುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಅವರ ಸಂಸ್ಥೆ ಪ್ರಾರಂಭದಿದಲು ಪುಸ್ತಕ ಸಂಗ್ರಹ ಮಾಡಿ ಓದುಗರಿಗೆ ಕೊಡುವುದಲ್ಲದೆ,
ಭಾರತಿಯ ವಿದ್ಯಾ ಕನ್ನಡ ಹಿರಿಯ ಪ್ರಾಥಮಿಕ ಸಂಸ್ಥೆ ಶಾಲೆಯ ಮಕ್ಕಳಿಗೆ ಬೇಕಾದ ಪುಸ್ತಕ ಕೊಟ್ಟಿರುತ್ತಾರೆ. ಇವರು ಕೊಟ್ಟಿರುವ ಪುಸ್ತಕಗಳು ನಮ್ಮ ಶಾಲೆಯಲ್ಲಿರುವ ಮಕ್ಕಳಿಗೆ ಓದಲು ಉಪಯುಕ್ತ ಆಗಿರುತ್ತವೆ. ಬಾಗೇವಾಡಿಮಠವರು ಕೊಟ್ಟಿರುವ ಪುಸ್ತಕಗಳನ್ನು ಸಹ ಹೃದಯದಿಂದ ಸ್ವೀಕರಿಸಿ ನಮ್ಮ ಗ್ರಂಥಾಲಯದಲ್ಲಿ ಜೋಡಿಸಲಾಗಿದೆ. ಜನಪದ ಸಂಸ್ಥೆಯ ನಿರ್ದೇಶಕರಾದ ಕೆ. ಎಸ್. ನಾಗರಾಜ್ ರವರು ಈ ಶಾಲೆಯಲ್ಲಿರುವ ಮಕ್ಕಳಿಗೆ ಜನಪದ, ಭಜನೆಪದ, ಶಿಕ್ಷಣದ ತಿಳಿವಳಿಕೆ ಮೂಡಿದವರು.
ಈ ಕಾರ್ಯಕ್ರಮದಲ್ಲಿ, ಪತ್ರಕರ್ತರಾದ ಶಿವಯೋಗಿ ಮಹಾನುಭಾವಿಮಠ, ಮಂಜುನಾಥ ಬಾರ್ಕಿ, ಮಲ್ಲಪ್ಪ ಪೇತಪ್ಪನವರ,
ಹಾಲೇಶ ಶಿವಪ್ಪನವರು ಶಾಲೆ ಅಧ್ಯಕ್ಷರಾದ ಅರ್ಚನಾ ಮಠದ, ಶಿಕ್ಷಕರಾದ ಶೈಲಜಾ ಅಂಗಡಿ, ಲಕ್ಷ್ಮೀ ಅಡಿಕಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Sponsors

Related Articles

Back to top button