ಸುಳ್ಯ – ಗಾಂಧಿನಗರ ಶಾಲೆಯ ಗಂಟೆ ಕಳ್ಳತನ, ಸ್ಥಳೀಯರಿಂದ ಕಳ್ಳನ ಸೆರೆ…

ಸುಳ್ಯ: ಇಲ್ಲಿಯ ಗಾಂಧಿನಗರ ಶಾಲೆಯ ಗಂಟೆ ಕಳವು ಮಾಡಿದವನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಸುಳ್ಯ ಗಾಂಧಿನಗರ ಸರಕಾರಿ ಶಾಲೆಯ ಗಂಟೆ ಕಳವು ಮಾಡಿ ಕೊಂಡೊಯ್ಯುವುದನ್ನು ಗಮನಿಸಿದ ಸ್ಥಳೀಯರು ನಿನ್ನೆ ಸಂಜೆ ಆತನನ್ನು ಮಾಲು ಸಮೇತ ಹಿಡಿದಿದ್ದಾರೆ. ನಂತರ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿರವರ ಸಹಕಾರದಿಂದ ಸೆರೆ ಹಿಡಿದ ಆತನನ್ನು ಪೊಲೀಸ್ ನವರಿಗೆ ಒಪ್ಪಿಸಲಾಯಿತು. ಆತನ ಹೆಸರು ಸಿದ್ದೇಶ್ ಎಂದಾಗಿದ್ದು, ಧಾರವಾಡ ಮೂಲದವನೆಂದು ತಿಳಿದುಬಂದಿದೆ. ನಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈತನ ಮೇಲೆ ಈ ಹಿಂದೆ ಬೈಕ್ ಕದ್ದ ಆರೋಪ ಕೂಡ ಇದೆ ಎನ್ನಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button