ಸುದ್ದಿ

ಡ್ರಗ್ ಕೇಸ್ – ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ…

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್​ ಪ್ರಕರಣದ ಆರನೇ ಆರೋಪಿಯಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ಮನೆಯ ಮೇಲೆ ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಹೆಬ್ಬಾಳ ಬಳಿ ಇರುವ ಆದಿತ್ಯ ಆಳ್ವಾ ನಿವಾಸದಲ್ಲಿ ಇದೀಗ ಶೋಧ ಕಾರ್ಯ ನಡೆಯುತ್ತಿದೆ.ಆದಿತ್ಯ ಆಳ್ವಾ ಮುಂಬೈನಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದಿತ್ಯ ಆಳ್ವಾ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವನಾಗಿದ್ದಾನೆ.
ಸರ್ಚ್​ ವಾರೆಂಟ್ ಪಡೆದು ಹೆಬ್ಬಾಳದ ಬಳಿ ಇರುವ ಆದಿತ್ಯ ಆಳ್ವ ಅವರ ‘ಹೌಸ್ ಆಫ್​ ಲೈಫ್’ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ದಾಖಲೆಗಳಿಗೆ ಹುಡುಕಾಟ ನಡೆಸಿದ್ದಾರೆ. ನಟಿ ರಾಗಿಣಿಯ ಬಂಧನವಾದ ನಂತರ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಆತ ಪತ್ತೆಯಾಗಿರಲಿಲ್ಲ. ಇಂದು ಆತನ ಮನೆ ಮೇಲೆ ಇನ್​ಸ್ಪೆಕ್ಟರ್​ ಪುನೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹೆಬ್ಬಾಳ ಸಮೀಪದ ಆದಿತ್ಯ ಆಳ್ವ ಅವರ ಮನೆ ಸುಮಾರು‌ 4 ಎಕರೆ ವಿಸ್ತೀರ್ಣದಲ್ಲಿದೆ. ಮನೆಯ ಆವರಣದಲ್ಲಿಯೇ ರೆಸಾರ್ಟ್ ಸಹ ಇದೆ. ಹಲವಾರು ಪಾರ್ಟಿಗಳು ಇಲ್ಲಿಯೇ ನಡೆದಿರೋ ಸಾಧ್ಯತೆಯಿದೆ. ಪೊಲೀಸರಿಗೆ ಸಿಕ್ಕಿರೋ ಪಾರ್ಟಿಗಳ ಪೋಟೊಗಳು ಸಹ ಇಲ್ಲಿಯದ್ದೇ ಎನ್ನಲಾಗಿದೆ.

Related Articles

Leave a Reply

Your email address will not be published.

Back to top button