ಡಿ.ಕೆ.ಶಿವಕುಮಾರ್ ರವರ ಮನೆಗೆ ಸಿ.ಬಿ.ಐ. ದಾಳಿ – ಟಿ.ಎಂ.ಶಾಹೀದ್ ತೆಕ್ಕಿಲ್ ಖಂಡನೆ…

ಸುಳ್ಯ: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಮನೆ ಮೇಲೆ ನಡೆದ ಸಿ.ಬಿ.ಐ. ದಾಳಿಯು ಕೇಂದ್ರ ಮತ್ತು ರಾಜ್ಯ ಸರಕಾರದ ಹತಾಶ ಭಾವನೆಯನ್ನು ವ್ಯಕ್ತ ಪಡಿಸುತ್ತದೆ ಎಂದು ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದು, ಮುಂದೆ ನಡೆಯುವ ಶಿರಾ ಮತ್ತು ಆರ್.ಆರ್.ನಗರ ಉಪ ಚುಣಾವಣೆಯ ಸೋಲಿನ ಭೀತಿಯಿಂದ ಈ ದಾಳಿ ನಡೆದಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರದ ತುಘಲಕ್ ದರ್ಬಾರ್ ಆಗಿದೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿ, ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣ,ರಾಜ್ಯ ಸರಕಾರ ಕೊರೋನ ಸಂದರ್ಭದಲ್ಲಿ ಪಿಪಿಇ ಕಿಟ್,ವೆಂಟಿಲೇಟರ್ ಮುಂತಾದ ಸಾಮಾಗ್ರಿ ಖರೀದಿಯಲ್ಲಿ ಕೊಟ್ಯಾಂತರ ಹಣ ಭ್ರಷ್ಟಾಚಾರ,ಡ್ರಗ್ಸ್ ದಂಧೆ ಮುಂತಾದ ಹಗರಣವನ್ನು ಮುಚ್ಚಿಹಾಕಲು ಹಾಗೂ ಜನರನ್ನು ದಿಕ್ಕು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಿದ ಹುನ್ನಾರವಾಗಿದೆ ಎಂದರು.
ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯನ್ನು ಅತ್ಯಾಚಾರ ಮಾಡಿ ಶವವನ್ನು ರಾತ್ರೋ ರಾತ್ರಿ ಪೋಲೀಸರು ದಹನಮಾಡಿದಲ್ಲದೆ ಅವರ ಕುಟುಂಬದವರಿಗೆ ಶವವನ್ನು ನೋಡಲು ಬಿಡದೆ ಅನ್ಯಾಯ ಮಾಡಿದ್ದಾರೆ. ಸಂತ್ರಸ್ಥೆಯ ಕುಟುಂಬದವರನ್ನು ರಾಜ್ಯದ ಮತ್ತು ಕೇಂದ್ರದ ಯಾವನೇ ಒಬ್ಬ ನಾಯಕರು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ ಮತ್ತು ಚಕಾರವೆತ್ತಲಿಲ್ಲ .ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಬೇಟಿ ನೀಡಲು ಹೋದಾಗ ಅವರನ್ನು ತಡೆಯುವ ಮೂಲಕ ವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡಲಾಯಿತು.ಕೇಂದ್ರ ಸರಕಾರವು ರೂಪಿಸಿದ ಕೃಷಿ ಮಸೂದೆಯು ರೈತ ವಿರೋಧಿಯಾಗಿದ್ದು, ಕೇವಲ ಅಂಬಾನಿ -ಅದಾನಿಯವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಹೊರತು ರೈತರ ಪರವಾಗಿಲ್ಲ ಮತ್ತು ಕೇವಲ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು 1 ಕೋಟಿ ಯಷ್ಟು ಉದ್ಯೋಗ ಕಲ್ಪಿಸಲು ಮೋದಿ ಸರಕಾರದಿಂದ ಸಾದ್ಯವಾಗಿಲ್ಲ. ಡಿ.ಕೆ. ಶಿವಕುಮಾರ್ ರವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾಗುವುದರಲ್ಲಿ ಯಾವುದೆ ಸಂಶಯವಿಲ್ಲ ಕರ್ನಾಟಕದ ಜನತೆ ಕಾಂಗ್ರೇಸ್ ನತ್ತ ಒಲವು ವ್ಯಕ್ತ ಪಡಿಸಿದ್ದು, ಅನೇಕ ಭಾಗಗಳಲ್ಲಿ ಯುವಕರು,ವಿದ್ಯಾವಂತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳುತ್ತಿದ್ದಾರೆ.ಆದರೆ ಕರ್ನಾಟಕದಲ್ಲಿ ಬಿ.ಜೆ.ಪಿ. ಸರಕಾರದ ಕೊಡುಗೆ ಏನು? ಪ್ರತಿ ಹಂತದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಎ ಪಿ ಎಂ ಸಿ ಕಾಯ್ದೆ ತಿದ್ದುಪಡಿ ಮಸೂದೆ ಮೂಲಕ ರೈತರಿಗೆ ಅನ್ಯಾವಾಗಿದೆ . ಸರಕಾರ ಖಜಾನೆ ಯಿಂದ ಕೋಟಿ ಕೋಟಿ ಹಣವನ್ನು ಲೂಟಿ ಹೊಡೆದು ಭ್ರಷ್ಟಾಚಾರದಲ್ಲಿ ಮುಳುಗಿದೆ.ರಾಜ್ಯದ ಜನತೆ ಈ ಸರಕಾರವನ್ನು ಮುಂದಿನ ದಿನದಲ್ಲಿ ತಿರಸ್ಕರಿಸಲಿದ್ದಾರೆ ಎಂದು ಟಿ.ಎಂ.ಶಾಹೀದ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಸಂಶೂದ್ದೀನ್ ,ಸಚಿನ್ ರಾಜ್ ಶೆಟ್ಟಿ,ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ. ಮೊದಲಾದವರು ಉಪಸ್ಥಿತರಿದ್ದರು.

ಟಿ.ಎಂ.ಶಾಹೀದ್

 

Sponsors

Related Articles

Leave a Reply

Your email address will not be published. Required fields are marked *

Back to top button