ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ – ವಾರ್ಷಿಕ ಸಾಮಾನ್ಯ ಸಭೆ…

ಬಂಟ್ವಾಳ : ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘನಿ., ಕಲ್ಲಡ್ಕ ಇದರ ೨೦೨೧-೨೦೨೧ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಕೆ ಪದ್ಮನಾಭ ಕೊಟ್ಟಾರಿಯವರು ಈ ಬಾರಿ ಸಂಘವು ರೂ ೭ ಲಕ್ಷ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ ೧೫% ಡಿವಿಡೆಂಡ್ ಹಾಗೂ ಪ್ರತೀ ಲೀ ರಿಗೆ ೦.೯೫ ಪೈಸೆಯಂತೆ ಬೋನಸ್ ಘೋಷಿಸಿದರು. ಕೋರೋನಾ ಸಂಕಷ್ಟದ ಸಮಯದಲ್ಲಿ ಕಳೆದ ಬಾರಿ ಸದಸ್ಯರಿಗೆ ಪ್ರತೀ ಲೀ ಹಾಲಿಗೆ ೦.೭೫ ಪೈಸೆಯಂತೆ ವಿಶೇಷ ಪ್ರೋತ್ಸಾಹಕ ಧನ ನೀಡಿದ್ದು ಈ ಬಾರಿ ಸದಸ್ಯರಿಗೆ ೨೫ ಕೆ.ಜಿ ಹಾಗೂ ೧೦ ಕೆ ಜಿ ಅಕ್ಕಿಯನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡುವ ಉದ್ದೇಶದಿಂದ ಸದಸ್ಯರು ಖರೀದಿ ಮಾಡುವ ಲವಣ ಮಿಶ್ರಣಕ್ಕೆ ಪ್ರತೀ ೧ ಕೆ ಜಿ ಗೆ ರೂ ೧೫ ಸಬ್ಸಿಡಿಯನ್ನು ೨೦೨೧ ರ ನವಂಬರ್ ೧ ರಿಂದ ಸಂಘದಲ್ಲಿ ಜಾರಿಗೊಳಿಸಲಾಗುವುದು. ಸಂಘದ ಬೆಳವಣಿಗೆಯಲ್ಲಿ ಸದಸ್ಯರು ಕೈ ಜೋಡಿಸುವುದರ ಜೊತೆಗೆ ತಾವು ಹೈನುಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಬೇಕು ಎಂದರು. ದ ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕಾರಾದ ಡಾ|| ಶ್ರೀನಿವಾಸ್ ರವರು ಮಾತನಾಡಿ ಹಾಲಿನ ಗುಣಮಟ್ಟದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಸದಸ್ಯರೊಂದಿಗೆ ಹಂಚಿಕೊoಡರು. ಗ್ರಾಮೀಣ ಪ್ರದೇಶದಲ್ಲಿ ಸಂಘದಲ್ಲಿ ಪ್ರತೀ ನಿತ್ಯ ೧೦೦೦ ಕ್ಕಿಂತಲೂ ಅಧಿಕ ಹಾಲು ಸಂಗ್ರಹಣೆಯಾಗುತ್ತಿರುವುದು ಬಹಳ ಸಂತೋಷದಾಯಕ ಎಂದರು. ವಿಸ್ತರಣಾಧಿಕಾರಿ ಶ್ರೀದೇವರಾಜ್ ರವರು ಒಕ್ಕೂಟದ ವಿವಿಧ ಯೋಜನೆಗಳನ್ನು ಹಾಗೂ ಅನುದಾನಗಳನ್ನು ಸವಿಸ್ತಾರಾವಾಗಿ ಸದಸ್ಯರಿಗೆ ತಿಳಿಸಿದರು.
ಸಭೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಒಂದು ವರ್ಷದಲ್ಲಿ ಹಾಲು ಹಾಕಿದ ಎಲ್ಲಾ ಸದಸ್ಯರಿಗೂ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಶ್ರೀರತ್ನಾಕರ ಪ್ರಭು, ನಿರ್ದೇದಕರಾದ ಸಂಕಪ್ಪ ಕೊಟ್ಟಾರಿ, ರತ್ನಾಕರ ಭಂಡಾರಿ, ಪುಷ್ಪರಾಜ್, ಜಯರಾಮ ಕೊಟ್ಟಾರಿ, ಶಿವಾನಂದ ಪೂಜಾರಿ, ಶ್ರೀಧರ ಶೆಟ್ಟಿ, ಶಾಂತಪ್ಪ ಮೂಲ್ಯ, ಗೋಪಾಲ ನಾಯ್ಕ, ಶ್ರೀಮತಿ ಧನವತಿ ಹಾಗೂ ಶ್ರೀಮತಿ ಸೌಮ್ಯ ರವರು ಉಪಸ್ಥಿತಿರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕೆ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಬ್ಬಂದಿಗಳಾದ ರಾಮಚಂದ್ರ ಹಾಗೂ ರೇವತಿ ಸಹಕರಿಸಿದರು.

Sponsors

Related Articles

Back to top button