ಸುದ್ದಿ

ಕುಸಿದು ಬಿದ್ದ ಆಡಳಿತ ಯಂತ್ರ, ಅಧಿಕಾರಿಗಳಿಂದ ರಾಜ್ಯ ಭಾರ- ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆರೋಪ…

ಸುಳ್ಯ: ಪ್ರಸಕ್ತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದ್ದು, ಆಡಳಿತ ಮಾಡಲು ಅಸಹಾಯಕರಾಗಿರುವ ಮುಖ್ಯಮಂತ್ರಿ ಮತ್ತು ಸಚಿವರುಗಳು ಮಾನಸಿಕ ಸ್ಥಿಮಿತ ಕಳಕೊಂಡಿದ್ದಾರೆ. ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದ್ದು ಅಧಿಕಾರಿಗಳು ರಾಜ್ಯ ಭಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯುರಪ್ಪ ಹಾಗೂ ಸಂಘ ಪರಿವಾರದ ನಡುವಿನ ಗುದ್ದಾಟದಿಂದ ರಾಜ್ಯದ ಜನ ಹೈರಾಣಗಿದ್ದಾರೆ. ಮುಂದೆ ಸರಕಾರ ಬರುವುದಿಲ್ಲ ಎಂದು ಸಚಿವರುಗಳು ಮನಗಂಡಿದ್ದಾರೆ. ಸರಕಾರಿ ಅಧಿಕಾರಿಗಳು ರಾಜ್ಯವನ್ನು ಆಳುತಿದ್ದು, ಸಚಿವರುಗಳು ಅಧಿಕಾರಿಗಳ ಮುಖಾಂತರ ಹಣವಸೂಲಿಗೆ ಇಳಿದಿದ್ದಾರೆ ಎಂದು ಟಿ ಎಂ ಶಾಹೀದ್ ತೆಕ್ಕಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿ ಎಂ ಶಾಹೀದ್ ತೆಕ್ಕಿಲ್

Related Articles

Back to top button