ಸುದ್ದಿ

ಮೆಲ್ಕಾರ್ – ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಶುಭಾರಂಭ…

ಬಂಟ್ವಾಳ: ದ.ಕ. ಜಿಲ್ಲೆಯ ಸಹಕಾರ ಕ್ಷೇತ್ರವು ಆರ್ಥಿಕ ಚಟುವಟಿಕೆಗಳಿಗೆ ಅಪಾರಕೊಡುಗೆ ನೀಡಿದೆ. ಮೇಲ್ಕಾರ್ ಪಾಣೆಮಂಗಳೂರಿನಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಶ್ರೀ ಶಂಕರ ಪತ್ತಿನ ಸಹಕಾರ ಸಂಘವು ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಲಿ. ಅನುಭವಿ ಹಿರಿಯರ ಮಾರ್ಗದರ್ಶನದಿಂದ ಸಂಸ್ಥೆ ಮುನ್ನಡೆಯಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಂಘವನ್ನು ಇಂದು (ಶುಕ್ರವಾರ) ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಧಾನಪರಿಷತ್ತು ಸದಸ್ಯ ಪ್ರತಾಪಸಿಂಹ ನಾಯಕ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ವರ್ಗದ ಜನರಿಗೆ ಸಂಘವು ನೆರವು ನೀಡುತ್ತಾ ಸೇವಾ ಮನೋಭಾವನೆಯಿಂದ ಪ್ರಗತಿ ಹೊಂದಲಿ ಎಂದು ಶುಭ ನುಡಿಗಳನ್ನಾಡಿದರು.
ಗಣಕಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಬಂಟ್ವಾಳ ತಾಲೂಕು ಸಹಕಾರಿ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಸಹಕಾರಿ ಸಂಘಗಳಲ್ಲಿ ಜನರಿಗೆ ವಿಶ್ವಾಸವಿದೆ . ಭವಿಷ್ಯದ ಗುರಿಯನ್ನಿರಿಸಿಕೊಂಡು ಸಂಘ ಮುನ್ನಡೆದು ಯಶಸ್ಸು ಪಡೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಎಂ.ಎಚ್. ಹೈಟ್ಸ್ ಮಾಲಿಕ ಹಾಜಿ ಮಹಮ್ಮದ್ ಇಕ್ಬಾಲ್, ಸಂಘದ ಪ್ರವರ್ತಕರಾದ ಜಯಾನಂದ ಪೆರಾಜೆ, ಮುರಳೀಧರ ರಾವ್, ಜಯರಾಮ ಪೂಜಾರಿ, ಶಾಂತಾ ಪುತ್ತೂರು, ರಮಾ ಎಸ್. ಭಂಡಾರಿ, ಅನಂತ ಪ್ರಭು, ಸುದರ್ಶನ ಮಯ್ಯ, ವೇದವ್ಯಾಸ ರಾಮಕುಂಜ, ಪಿ.ಜಯರಾಮ ಶೇಖ, ಕೈಯೂರು ಈಶ್ವರ ಭಟ್, ಪ್ರವೀಣ್ ಚಂದ್ರ, ಅನಿಲ್ ಕುಮಾರ್ ಇದ್ದರು.

ಸಂಘದ ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ಸ್ವಾಗತಿಸಿ, ಸಂಘದ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಸಹಪ್ರವರ್ತಕ ಜಯಾನಂದ ಪೆರಾಜೆ ವಂದಿಸಿದರು. ಶಾಂತಾ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.

Related Articles

One Comment

  1. ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಮೆಲ್ಕಾರ್ ಇದರ ಉದ್ಘಾಟನಾ ಸಮಾರ್ಭದ ವರದಿ ಅತ್ಯುತ್ತಮ ವಾಗಿ ಪ್ರಸಾರ ವಾಗಿದೆ..ವಾರ್ತಾ ಲೋಕ ಬಳಗಕ್ಕೆ ಅಭಿನಂದನೆಗಳು.

Leave a Reply

Your email address will not be published.

Back to top button