ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಸಂಭ್ರಮದ YENSPLASH -2022…

ಮೂಡುಬಿದ್ರಿ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ YENSPLASH -2022 ಜು. 2 ಮತ್ತು 3 ರಂದು ಅತ್ಯಂತ ಸಂಭ್ರಮದಿಂದ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಹಾಗೂ ಅತಿಥಿಗಳಾಗಿ ಭಾಗವಹಿಸಿದ್ದ ತುಳು ಸಿನಿಮಾ ನಟ ಅರ್ಜುನ್ ಕಾಪಿಕಾಡ್ ಜು. 2 ರಂದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ರಸಪ್ರಶ್ನೆ, ಚಿತ್ರಕಲೆ, ರಂಗೋಲಿ, ಎಕ್ಸ್ ಟೆಂಪೋರ್, 3D ಮಾಡೆಲ್ಲಿಂಗ್ , ಡಿಬೇಟ್, ಜಾಜ್ ಆಫ್ , ಸೋಲೋ ಡಾನ್ಸ್, ಗ್ರೂಪ್ ಡಾನ್ಸ್, ನಿಧಿ ಶೋಧನೆ, ರೋಬೊ ವಾರ್, ಲೈನ್ ಫಾಲೋವರ್, ಅಗ್ನಿರಹಿತ ಅಡುಗೆ, ರೋಬೊ ಸಾಕರ್, ಮೆಹಂದಿ, ಕೋಡಿಂಗ್ ಚಾಲೆಂಜ್, ಪೆನ್ಸಿಲ್ ಸ್ಕೆಚ್, ಫೇಸ್ ಪೇಂಟಿಂಗ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಬಳಿಕ ” ಲಗೋರಿ ಬ್ಯಾಂಡ್ ” ತಂಡದವರಿಂದ ರಸಮಂಜರಿ ನಡೆಯಿತು.
ಜು. 3 ರಂದು ವಿಡಿಯೋ ಗೇಮ್, ಹಾಡುಗಾರಿಕೆ, ಕಿರು ಚಿತ್ರ, ಬ್ಯಾಟಲ್ ಆಫ್ ಬ್ಯಾಂಡ್, ಮಿಸ್ಟರ್ ಮತ್ತು ಮಿಸ್ YIT , ಫ್ಲಾಶ್ ಮಾಬ್, ಫೋಟೋಗ್ರಫಿ, ವಿಡಿಯೋಗ್ರಫಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ನಂತರ HolyC ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಎರಡು ದಿನಗಳ ಈ YENSPLASH -2022 ಕಾರ್ಯಕಮದಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮತ್ತು ಕ್ಯಾಂಪಸ್ ಆಡಳಿತಾಧಿಕಾರಿ ಮಹಮ್ಮದ್ ಶಾಹಿದ್ ಅವರು ಅಭಿನಂದನೆ ತಿಳಿಸಿದ್ದಾರೆ .

 

 

 

 

 

Sponsors

Related Articles

Back to top button