ಮಂಗಳೂರು – ಎಕ್ಕೂರು ನಿವಾಸಿಗೆ ಕೊರೊನ ಸೋಂಕು ದೃಢ…

ಮಂಗಳೂರು: ಮನೆಮನೆಗೆ ತೆರಳಿ ಮೀನು ವ್ಯಾಪಾರ ಮಾಡುತ್ತಿದ್ದ ಎಕ್ಕೂರು ನಿವಾಸಿಯೊಬ್ಬರಿಗೆ ಕೊರೊನ ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.

ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದ. ಈ ವೇಳೆ ಆತನ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಸದ್ಯ ಆತನಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ. ಈತ ಮಂಗಳೂರು ಬಂದರಿಗೆ ತೆರಳಿ ಅಲ್ಲಿಂದ ಮೀನು ತಂದು, ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಜಿಲ್ಲಾಡಳಿತ ಮಾಡಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button