ಕಡಬ ಸಿ.ಎ.ಬ್ಯಾಂಕ್‌ ಸಿಬಂದಿಗೆ ಕೊರೊನ ಸೋಂಕು – ಬ್ಯಾಂಕ್‌ ಹಾಗೂ ಹಲವು ಮನೆಗಳು ಸೀಲ್‌ಡೌನ್‌…

ಕಡಬ: ಕ್ವಾರಂಟೈನ್‌ನಲ್ಲಿದ್ದ ಕಡಬ ಸಿ.ಎ.ಬ್ಯಾಂಕ್‌ನ ಸಿಬಂದಿಯೋರ್ವರಿಗೆ ರವಿವಾರ ಕೊರೊನ ಸೋಂಕು ದೃಢಪಟ್ಟಿದೆ.
ಕೋವಿಡ್ ಸೋಂಕು ದೃಢಪಟ್ಟ ಶಿಕ್ಷಕರೊಬ್ಬರು‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆದ ಕೂಡಲೇ ಸಿ.ಎ.ಬ್ಯಾಂಕ್‌ಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ ಸಿಬಂದಿ ಹಾಗೂ ಕೆಲವು ನಿರ್ದೇಶಕರು ಸ್ವಯಂ ಕ್ವಾರಂಟೈನ್‌ನಲ್ಲಿದ್ದರು.
ಈಗ ಸಿ.ಎ. ಬ್ಯಾಂಕ್‌ ಸಿಬಂದಿ ನೂಜಿಬಾಳ್ತಿಲದ ನಿವಾಸಿಗೆ ಕೋವಿಡ್ ದೃಢಪಟ್ಟಿದ್ದು ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿ.ಎ.ಬ್ಯಾಂಕ್‌ ಸುತ್ತ 100 ಮೀ. ಪ್ರದೇಶ ಮತ್ತು ಕೋವಿಡ್ ಬಾಧಿತ ವ್ಯಕ್ತಿಯ ಮನೆ ಇರುವ ನೂಜಿಬಾಳ್ತಿಲ ಗ್ರಾಮದ ನಿಡ್ಡೋಡಿ ಪ್ರದೇಶದಲ್ಲಿ 5 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button