ಸುದ್ದಿ

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ವತಿಯಿಂದ ಕೋವಿಡ್ 19 ವಿಚಾರ ಗೋಷ್ಠಿ…

ಸುಳ್ಯ:ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಂತರಾಷ್ಟ್ರೀಯ ಸಮಿತಿ ವತಿಯಿಂದ “ಕೋವಿಡ್ ಸಮಯದಲ್ಲಿ ಹಾಗೂ ನಂತರದ ಜೀವನ” ಎಂಬ ವಿಷಯದ ಕುರಿತು ಸೆ. 4 ರಂದು Zoom App ನಲ್ಲಿ ಆನ್ ಲೈನ್ ‌ ಕಾರ್ಯಕ್ರಮವೊಂದು ನಡೆಸಲು ತೀರ್ಮಾನಿಸಿದ್ದು, ಕೇರಳದ ಮರ್ಕಝ್ ನಾಲೇಡ್ಜ್ ಸಿಟಿ ಇದರ ನಿರ್ದೇಶಕರಾದ ಡಾ| ಅಬ್ದುಲ್ ಹಕೀಮ್ ಅಲ್-ಅಝ್’ಹರಿ ಉಸ್ತಾದರು ಉಪನ್ಯಾಸವನ್ನು ನೀಡಲಿದ್ದಾರೆ.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಅಲೀ ಮುಸ್ಲಿಯಾರ್ ರವರ ದುಆದೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ಇಲಾಖೆಯ ಅಧ್ಯಕ್ಷರಾದ ಡಾ| ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿಯವರು ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿಯವರಾದ ಜನಾಬ್ ಖಮರುದ್ದೀನ್ ಗೂಡಿನಬಳಿಯವರು ಉದ್ಘಾಟಿಸಿ, ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ಹಾಗೂ ಫೈನಾನ್ಷಿಯಲ್‌ ಕಂಟ್ರೋಲರ್ ಬಹು| ಹಮೀದ್ ಸಅದಿ ಈಶ್ವರಮಂಗಳ ರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಕೋವಿಡ್ ಕಾಲದಲ್ಲಿ ಹಲವರ ಕೆಲಸಗಳು ನಷ್ಟವಾಗಿದ್ದು, ಇನ್ನು‌ ಕೆಲವರು ಆರ್ಥಿಕವಾಗಿ ಬಹುದೊಡ್ಡ ನಷ್ಟದಲ್ಲಿದ್ದಾರೆ. ಇದಕ್ಕೂ ಮಿಗಿಲಾಗಿ ಈ ಕೋವಿಡ್ ಕಾಲದಿಂದ ಹೊರಬಂದ ಮೇಲೆ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಊಹಿಸಲೂ ಸಾಧ್ಯವಿಲ್ಲದ ವಿಷಯವಾಗಿದೆ. ಹೀಗಿರುವಾಗ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದು ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಉಸ್ತಾದರು ನೀಡುವ ಸಲಹೆಗಳು ಉಪಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಲು ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ಹಾಗೂ ಇಹ್ಸಾನ್ ಇಲಾಖೆಯ ಕಾರ್ಯದರ್ಶಿ ರಹೀಮ್ ಸಅದಿ ಖತ್ತರ್ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button