ನೇತ್ರಾವತಿ ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ…
ಮಂಗಳೂರು : ಶುಕ್ರವಾರ ಅಪರಾಹ್ನ ಉಳ್ಳಾಲ ಸೇತುವೆಯಿಂದ ಹಾರಿದ ವ್ಯಕ್ತಿಯ ಶವವು ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂದು ಗುರುತಿಸಲಾಗಿದೆ.
ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.
Sponsors