ಸಹ್ಯಾದ್ರಿ ಕಾಲೇಜಿನಲ್ಲಿ ಎರಡನೇ ಉಚಿತ ವಿದ್ಯುತ್ ಮಗ್ಗ ನೇಯ್ಗೆ ತರಬೇತಿ…

ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ವ್ಯವಹಾರ ಆಡಳಿತ ವಿಭಾಗವು ಕೇಂದ್ರ ಸರಕಾರದ ವಿಜ್ಞಾನ ಮತ್ತು ಕೈಗಾರಿಕ ಸಂಶೋಧನೆ ವಿಭಾಗದ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಹಿಳೆಯರಿಗೆ ಪವರ್ ಲೂಮ್ ನೇಯ್ಗೆ ತರಬೇತಿಯನ್ನು ನಡೆಸುತ್ತಿದೆ.
ಪ್ರತೀ ತಂಡದಲ್ಲಿ 10 ರಿಂದ್ 15 ಮಹಿಳೆಯರಿಗೆ ಪವರ್ ಲೂಮ್ ನಲ್ಲಿ ಬಟ್ಟೆ ನೇಯ್ಗೆಯ ತರಬೇತಿಯನ್ನು ನುರಿತ ತರಬೇತುದಾರರಿಂದ ನೀಡಲಾಗುವುದು. ಈಗಾಗಲೇ ಮೊದಲ ತಂಡದ ತರಬೇತಿ ಯಶಸ್ವಿಯಾಗಿ ಮುಗಿದಿದ್ದು ಎರಡನೇ ತಂಡದ ತರಬೇತಿ ಮೇ 09, 2022 ರಂದು ಆರಂಭವಾಗಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸಕ್ತ ಮಹಿಳೆಯರು(18-45 ವಯಸ್ಸಿನ) ಈ ತರಬೇತಿಗೆ ಅರ್ಜಿಯನ್ನು ಆಧಾರ್ ಪ್ರತಿಯೊಂದಿಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು. ತರಬೇತಿ ಪಡೆದ ಅಭ್ಯರ್ತಿಗಳು ಸರಕಾರದಿಂದ ಲಭ್ಯವಿರುವ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ. ಮೊದಲು ಬಂದ ಅರ್ಜಿಗಳಿಗೆ ಆದ್ಯತೆಯ ಮೇಲೆ ಅವಕಾಶ.
ಹೆಚ್ಚಿನ ಮಾಹಿತಿಗಾಗಿ 9845089165 ನಲ್ಲಿ ಸಂಪರ್ಕಿಸಬಹುದು.
ವಿಳಾಸ: MBA Department,
Sahyadri College of Engineering & Management,
Mangalore- 575007.

Sponsors

Related Articles

Back to top button