ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ 16 ನೇ ವರ್ಷದ ಇಫ್ತಾರ್ ಕಿಟ್ ವಿತರಣೆ…

ಸುಳ್ಯ: ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ರಂಜಾನ್ ತಿಂಗಳಲ್ಲಿ ಪ್ರತಿವರ್ಷ ಸೌಹಾರ್ದ ಇಫ್ತಾರ್ ಆಚರಣೆಗಳನ್ನು ಮಾಡುತ್ತಾ ಬಂದಿದ್ದು, ಈ ಬಾರಿ ಕೂಡಾ 74 ಮನೆಗಳಿಗೆ ಇಫ್ತಾರ್ ಕಿಟ್ ಗಳನ್ನು ವಿತರಿಸಲಾಯಿತು.
ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ 74 ಮನೆಗಳಿಗೆ ಇಫ್ತಾರ್ ಕಿಟ್ ಗಳನ್ನು ಇಂದು ವಿತರಿಸಲಾಯಿತು.
ಸಭಾಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ವಹಿಸಿದ್ದರು. ಕಳೆದ ವರ್ಷದಿಂದ ಕೊರೋನಾ ರೋಗ ದೇಶದದ್ಯಾಂತ ಹರಡಿದ್ದು ಈ ಬಾರಿ ಕೂಡಾ ಕೊರೋನಾ 2ನೇ ಅಲೆಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್ ಡೌನ್ ನಿಂದ ಜನರು ತತ್ತರಿಸಿದ್ದಾರೆ . ಹಾಗಾಗಿ ಕೊರೋನಾ ನಿರ್ಮೂಲನೆಗಾಗಿ ವಿಶೇಷ ಪ್ರಾರ್ಥನೆಯನ್ನು ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಅಲ್ ಹಾಜ್ ಇಸ್ಹಾಖ್ ಬಾಖವಿ ನಿರ್ವಹಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಜಾವೇದ್ ತೆಕ್ಕಿಲ್, ಲತೀಫ್ ಮೊಟ್ಟಂಗಾರ್ ತೆಕ್ಕಿಲ್ ಇದ್ದರು. ಇಫ್ತಾರ್ ಕಿಟ್ ತಯಾರಿಸಿ ವಿತರಿಸಲು ತಾಜ್ ಟರ್ಲಿ, ಜುನೈದ್, ಹಮೀದ್ ಕಲ್ಲುಗುಂಡಿ, ಸಹಲ್, ಸಫ್ವಾನ್ ಸಹಕರಿಸಿದರು.

Sponsors

Related Articles

Back to top button