ಸುದ್ದಿ

ಎಸ್ ಕೆ ಎಸ್ ಎಸ್ ಎಫ್ ಪೇರಡ್ಕ ಗೂನಡ್ಕ ಶಾಖೆ ವತಿಯಿಂದ ಮದರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ… 

ಸುಳ್ಯ: ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆಯ ವತಿಯಿಂದ ಮೇ 20 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ತಖ್ವಿಯತ್ತುಲ್ ಇಸ್ಲಾಂ ಮದರಸದಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪುಸ್ತಕಗಳನ್ನು ವಿಧಾನ ಪರಿಷತ್ತು ಸದಸ್ಯರಾದ ಸಲೀಂ ಅಹಮ್ಮದ್ ಅವರು ವಿತರಿಸಿ ಶಾಖೆಯ ಕಾರ್ಯಕರ್ತರನ್ನು ಅಭಿನಂದಿಸಿದರು.

ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ತೆಕ್ಕಿಲ್ ಪ್ರತಿಷ್ಠಾನ ಇದರ ಅದ್ಯಕ್ಷರಾದ ಟಿಎಂ ಶಹೀದ್, ಪೊನ್ನಣ್ಣ,ಟಿ ಎಂ ಬಾಬ ಹಾಜಿ ತೆಕ್ಕಿಲ್ ಜಮಾಅತ್ ಕಾರ್ಯದರ್ಶಿ ರಝಾಕ್ ಹಾಜಿ, ಎಂ ಆರ್ ಡಿ ಎ ಅಧ್ಯಕ್ಷರಾದ ಝಾಕೀರ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ರಾದ ಸಾಜಿದ್ ಅಝ್ಅರಿ, ಮಾಜಿ ಅದ್ಯಕ್ಷರಾದ ಮುನೀರ್ ದಾರಿಮಿ, ಅದ್ಯಾಪಕರಾದ ನೂರುದ್ದೀನ್ ಅನ್ಸಾರಿ ಹಾಗೂ ಎಸ್ ಕೆ ಎಸ್ ಎಸ್ ಎಫ್ ಸದಸ್ಯರು ಜಮಾಅತ್ ಸದಸ್ಯರು ಊರಿನ ಗಣ್ಯರು ಉಪಸ್ತಿತರಿದ್ದರು  ಜಮಾಅತ್ ಖತೀಬರಾದ ರಿಯಾಝ್ ಫೈಝಿ ದುವಾ ನೆರವೇರಿಸಿದರು.ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಸ್ವಾಗತಿಸಿ ವಂದಿಸಿದರು.

Related Articles

Back to top button