ರೈಡ್ ಫಾರ್ ರೋಟರಿ….

ಸುಳ್ಯ: ರೈಡ್ ಫಾರ್ ರೋಟರಿಯ 14 ದೇಶಗಳ 38 ವಿದೇಶಿ ರೋಟೇರಿಯನ್ನರ ತಂಡವು ಸುಳ್ಯ ರೋಟರಿ ಕ್ಲಬ್ ಗೆ ಜ.19 ರಂದು ಭೇಟಿ ನೀಡಿತು.
ಈ ತಂಡದ ಪ್ರಮುಖ ಉದ್ದೇಶ ಸೇವೆಗಾಗಿ ನಿಧಿ ಸಂಗ್ರಹ. ಈ ತಂಡವು ಮಂಗಳೂರಿನಿಂದ ಹೊರಟು ಮಡಿಕೇರಿ, ಮೈಸೂರು, ಊಟಿ, ವಯನಾಡು, ಕೊಯಂಬುತ್ತೂರು, ಮೂನಾರ್, ಕೊಚ್ಚಿನ್ ನಲ್ಲಿ 29 ರಂದು ಸಮಾಪನಗೊಳ್ಳಲಿದೆ.
ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ರೊ .ಡಾ. ಪುರುಷೋತ್ತಮ ಕಟ್ಟೆಮನೆ ವಿದೇಶಿ ತಂಡದವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸುಳ್ಯದ ಧ್ವಜವನ್ನು ಯು ಎಸ್ ಎ, ಯು ಕೆ, ಸ್ವೀಡನ್, ಜರ್ಮನಿ, ಇಂಗ್ಲೆಂಡ್, ಪೋಲೆಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಕೆನಡಾ, ನೆದೆರ್ಲ್ಯಾ0ಡ್, ಡೆನ್ಮಾರ್ಕ್, ಮತ್ತು ಫ್ರಾನ್ಸ್ ಮುಂತಾದ 14 ದೇಶಗಳ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ತದನಂತರ ವಿದೇಶಿ ರೋಟೇರಿಯನ್ನರ ತಂಡದ ಪರವಾಗಿ ಮಾರ್ಕೊಸ್ ಮತ್ತು ರಾಜ್ ಸುಳ್ಯ ರೋಟರಿ ಸಂಸ್ಥೆಯ ಸಮಾಜ ಸೇವೆಯನ್ನು ಹೊಗಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ರೊ.ಜೋಸೆಫ್ ಮ್ಯಾಥ್ಯು, ವಲಯ 5 ರ ಅಸಿಸ್ಟಂಟ್ ಗವರ್ನರ್ ಡಾ. ಕೇಶವ ಪಿ. ಕೆ., ರೋಟರಿ ಸಿಟಿಯ ಅಧ್ಯಕ್ಷ ರೊ. ಭಾನುಪ್ರಕಾಶ್, ಸಂಚಾಲಕ ರೊ. ಜಿತೇಂದ್ರ, ಕಾರ್ಯದರ್ಶಿ ಸನತ್, ಖಜಾಂಜಿ ಸತೀಶ್ ಕೆ.ಜಿ, ಗಣೇಶ್ ಆಳ್ವ, ಪ್ರಭಾಕರ ನಾಯರ್ , ಅವಿನಾಶ್ ಡಿ. ಕೆ ಹಾಗೂ ಶ್ರೀನಿವಾಸ್ ಕೆ ಉಪಸ್ಥಿತರಿದ್ದರು. ಸಭೆಯ ನಂತರ ಮಡಿಕೇರಿ ಕಡೆಗೆ ವಿದೇಶಿ ರೋಟೆರಿಯನ್ನರ ತಂಡ ನಿರ್ಗಮಿಸಿತು.

Sponsors

Related Articles

Leave a Reply

Your email address will not be published. Required fields are marked *

Back to top button