ಶ್ರೀ ಪುತ್ತಿಗೆ ಶ್ರೀಗಳಿಗೆ ಕನಕಾಭಿಷೇಕ…
ಕೋಲ್ಕತ್ತ : ತಮ್ಮ ಚತುರ್ಥ ಪರ್ಯಾಯ ಪೂರ್ವ ಸಂಚಾರ ಪ್ರಯುಕ್ತ ಸಶಿಷ್ಯರಾಗಿ ಭಾರತ ಪರಿಕ್ರಮ ಯಾತ್ರೆ ಕೈಗೊಂಡು ಕೋಟಿ ಗೀತಾ ಲೇಖನ ಯಜ್ಞ ನೋಂದಣಿ ಅಭಿಯಾನದಲ್ಲಿ ನಿರತರಾಗಿರುವ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ
ಕೋಲ್ಕತ್ತದಲ್ಲಿ ಕನಕಾಭಿಷೇಕ ಸಹಿತ ಪೌರ ಸನ್ಮಾನ ನಡೆಯಿತು .
ಜೂನ್ 25 ರಂದು ಸಂಜೆ 5 ಗಂಟೆಗೆ ಶ್ರೀ ಪುತ್ತಿಗೆ ಮಠದ ಕೋಲ್ಕತ್ತ ಶಾಖೆಯಲ್ಲಿ ಕೋಲ್ಕತ್ತದ ವಿವಿಧ ಸಂಘಟನೆಗಳ- ಜನ ಪ್ರತಿನಿಧಿಗಳ – ಮತ್ತು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಈ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.
ಕಿರಿಯ ಶ್ರೀ ಪಾದರಾದ ಶ್ರೀ ಶ್ರೀ ಸುಶ್ರೀ0ದ್ರ ತೀರ್ಥ ಸ್ವಾಮೀಜಿಯವರು ಉದ್ಯಮಿ ಮಂಜುನಾಥ್ ಶೆಟ್ಟಿ ಅವರ
ಕನಕಾಭಿಷೇಕ ಸೇವೆಯನ್ನು ಸಮರ್ಪಿಸಿದರು.
ಖ್ಯಾತ ಉದ್ಯಮಿ ರಮೇಶ್ ಅಗರ್ವಾಲ್ – ನೀಹಾರಿಕ ಅಗರ್ವಾಲ್ ದಂಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪೌರ ಸನ್ಮಾನ ಸಮಿತಿಯ ಅಧ್ಯಕ್ಷ ರಂಗ ಶ್ರೀನಿವಾಸ ಅತಿಥಿಗಳನ್ನು ಗೌರವಿಸಿದರು. ಕೋಲ್ಕತ್ತ ವೇದ ಭವನದ ಪ್ರಧಾನ ಕಾರ್ಯದರ್ಶಿ ಕಣ್ಣನ್ ಸ್ವಾಗತಿಸಿದರು. ಕೋಲ್ಕತ್ತ ಮಠದ ಮ್ಯಾನೇಜರ್ ಅಶೋಕ್ ಸಾಮಗ ವಂದಿಸಿದರು. ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕ ಕೆ. ವಿ. ರಮಣ್ ಆಚಾರ್ಯ ನಿರೂಪಿಸಿದರು. ಆಕಾಶ್ ಉಪಾಧ್ಯಾಯ ಮತ್ತು ಬಳಗ ದವರು ವೇದ ಘೋಷ ನಡೆಸಿದರು . ಶಾಖ ಪ್ರಭಾರಿ ರಾಘವೇಂದ್ರ ಭಟ್ , ಭರತ್ ಭಟ್ ಸಹಕರಿಸಿದರು .
ಇದೇ ಸಂದರ್ಭದಲ್ಲಿ ಉಡುಪಿ ಶ್ರೀ ಪುತ್ತಿಗೆ ವಿದ್ಯಾಪೀಠದ ಐದನೇ ಶಾಖೆಯನ್ನು ಉಭಯ
ಶ್ರೀಪಾದರು ಉದ್ಘಾಟಿಸಿದರು .
ಕಾರ್ಯಕ್ರಮಕ್ಕೂ ಮೊದಲು ಯತಿಗಳು- ಅತಿಥಿಗಳನ್ನು ಪಂಚ ವಾದ್ಯ ಮೆರವಣಿಗೆ ಯೊಂದಿಗೆ ವೇದಿಕೆಗೆ ಕರೆ ತರಲಾಯಿತು. ದಕ್ಷಿಣ- ಉತ್ತರ ಸಮನ್ವಯದ ವಿಶಿಷ್ಟ ಭಜನ ಸಂಕೀರ್ತನ ಕಾರ್ಯಕ್ರಮ ಆಯೋಜಿಸಲಾಗಿತ್ತು.