ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ ವಿಫಲ – ಯು.ಟಿ. ಖಾದರ್…

ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೊರೊನಾದಿಂದ ಈಗಾಗಲೇ ಐದು ಸಾವು ಆಗಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಒಬ್ಬ ಸೋಂಕಿತ ಸಾವನ್ನಪ್ಪಿದರೆ 150 ಜನರಿಗೆ ಸೋಂಕು ತಗುಲುತ್ತದೆ. ಇದು ವೈದ್ಯಕೀಯ ಅಧ್ಯಯನದಿಂದ ದೃಢಪಟ್ಟಿದೆ. ದ.ಕ ಜಿಲ್ಲೆಯ ಕೊರೊನಾ ಮೂಲವನ್ನೇ ಪತ್ತೆ ಹಚ್ಚಲು ಆಗಲಿಲ್ಲ. ಯಾವುದೇ ವಿಚಾರದ ಬಗ್ಗೆ ಜಿಲ್ಲಾಡಳಿತದಲ್ಲಿ ಸ್ಪಷ್ಟತೆ ಇಲ್ಲ. ಜಿಲ್ಲಾಡಳಿತವು ವೈರಸ್‌ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಕೈಗೊಂಡಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲಾ ದೇಶಗಳಂತೆ ಭಾರತದಲ್ಲೂ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ರೈತನಿಗೆ ಸಾಲ ಜಾಸ್ತಿಯೇ ಹೊರತು ಬಡ್ಡಿ ಮನ್ನಾ ಮಾಡಲಿಲ್ಲ. ಅವತ್ತು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ರಿ, ಈಗ ಪ್ರತಿಯೊಬ್ಬರ ಖಾತೆಗೆ 15 ಸಾವಿರ ರೂಪಾಯಿ ಹಾಕಿ. ಆಗ ಎರಡೂ ಮಾತು ಉಳಿಸಿಕೊಂಡ ರೀತಿ ಆಗುತ್ತದೆ. ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಘೋಷಣೆ ಮಾಡಿಲ್ಲ. ಮೀನುಗಾರಿಕೆ ಹಾಗೂ ನೇಕಾರರಿಗೆ ಹಳೆಯ ಯೋಜನೆಯನ್ನೇ ಮತ್ತೊಮ್ಮೆ ಪ್ರಕಟಿಸಿದ್ದಾರೆ. ಎಂದು ತಿಳಿಸಿದರು.

ವಂದೇ ಭಾರತ್ ಮಿಷನ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣ ನಿರ್ಲಕ್ಷ್ಯವಾಗಿದೆ. ಡಿ.ವಿ.ಸದಾನಂದ ಗೌಡರ ಮುತುವರ್ಜಿಯಿಂದ ಕೇವಲ ಒಂದೇ ವಿಮಾನ ಬಂದಿದೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಹತ್ತಾರು ವಿಮಾನ ಬರುತ್ತಿದೆ. ಯಾವುದೇ ರಾಷ್ಟ್ರದಿಂದ ಮಂಗಳೂರಿಗೆ ವಿಮಾನ ಬರುತ್ತಿಲ್ಲ.ಈ ಕೆಲಸವನ್ನು ದ.ಕ ಸಂಸದರಿಗೆ ಕೂತಲ್ಲಿಯೇ ಮಾಡಬಹುದು. ಆದರೆ ಸಂಸದ ಕಟೀಲ್‌ ಕಿಟ್‌ ಕೊಡುವುದರಲ್ಲಿ ಬ್ಯುಸಿ ಇದ್ದಾರೆ. ಕಾರ್ಪೋರೆಟರ್ ಮಾಡುವ ಕೆಲಸವನ್ನು ಸಂಸದರು ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

Sponsors

Related Articles

Back to top button