ದ.ಕ – 4 , ಉಡುಪಿ – 92 ಕೊರೋನ ಪ್ರಕರಣಗಳು ಪತ್ತೆ….

ಮಂಗಳೂರು: ಇಂದು(ಗುರುವಾರ) ದ.ಕ. ಜಿಲ್ಲೆಯಲ್ಲಿ 4 ಹಾಗೂ ಉಡುಪಿ ಜಿಲ್ಲೆಯಲ್ಲಿ 92 ಕೊರೋನ ಪ್ರಕರಣಗಳು ಪತ್ತೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಪತ್ತೆಯಾದ 4 ಪ್ರಕರಣಗಳ ಪೈಕಿ ಮೂವರು ಮಹಾರಾಷ್ಟ್ರದಿಂದ ಬಂದವರಾದರೆ, ಒಬ್ಬರು ದುಬೈನಿಂದ ಬಂದವರಾಗಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು ಒಂದೇ ದಿನ 257 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ. ನಾಲ್ವರು ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 9, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಬೆಳಗಾವಿಯಲ್ಲಿ 12, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಚಿಕ್ಕಬಳ್ಳಾಪುರದಲ್ಲಿ 2, ದಕ್ಷಿಣ ಕನ್ನಡದಲ್ಲಿ 4, ವಿಜಯಪುರ, ಮೈಸೂರು, ಬಳ್ಳಾರಿಯಲ್ಲಿ ತಲಾ 1, ಗದಗದಲ್ಲಿ 2, ತುಮಕೂರಿನಲ್ಲಿ 1, ಹಾವೇರಿಯಲ್ಲಿ 1 ಪ್ರಕರಣ ದೃಢಪಟ್ಟಿದೆ.

ಉಡುಪಿ 564 ಪ್ರಕರಣಗಳೊಂದಿಗೆ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. 510 ಪ್ರಕರಣಗಳೊಂದಿಗೆ ಕಲಬುರಗಿ ಹಾಗೂ 424 ಸ್ಥಾನಗಳೊಂದಿಗೆ ಬೆಂಗಳೂರು ನಗರ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ರಾಯಚೂರು ನಾಲ್ಕು, ಮಂಡ್ಯ ಐದು ಹಾಗೂ ಯಾದಗಿರಿ ಆರನೇ ಸ್ಥಾನದಲ್ಲಿವೆ.

Sponsors

Related Articles

Leave a Reply

Your email address will not be published. Required fields are marked *

Back to top button