ಸುದ್ದಿ

ಡಾ. ಗೋವರ್ಧನ್ ರಾವ್ ಅವರಿಗೆ “ ಕಲಾಸಂಗಮ” ರಾಜ್ಯ ಪ್ರಶಸ್ತಿ…

ಬಂಟ್ವಾಳ : ಎಸ್.ಎಸ್. ಕಲಾ ಸಂಗಮ ಬೆಂಗಳೂರು ಇವರು ಈ ಬಾರಿ ಏರ್ಪಡಿಸಿದ ಪ್ರತಿಷ್ಠಿತ “ ಕಲಾಸಂಗಮ” ರಾಜ್ಯ ಪ್ರಶಸ್ತಿಗೆ ಬಿ.ಸಿ.ರೋಡಿನ ರೋಟೇರಿಯನ್, ಪ್ರೊಫೆಸರ್ ಡಾ. ಗೋವರ್ಧನ್ ರಾವ್ ಇವರು ಆಯ್ಕೆಯಾಗಿದ್ದು, ಜು. 31 ರಂದು ಬೆಂಗಳೂರಿನ ಕನ್ನಡ ಭವನದ ನಯನ ಕಲಾಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನದಲ್ಲಿ ಪ್ರಶಸ್ತಿ ಹಾಗೂ ಗೌರವವನ್ನು ಸ್ವೀಕರಿಸಿರುತ್ತಾರೆ.
ಸುಮಾರು 60 ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಹಿರಿಯರ, ಕಿರಿಯರ ಸೇವೆಯನ್ನು ಗುರುತಿಸಿ ಪ್ರಖ್ಯಾತ ಗಾಯಕ ಶಶಿಧರ ಕೋಟೆ, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ನಜ್ಮಾ ಪಾರೂಖ್ ಮುಂತಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

 

Related Articles

Back to top button