ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – NSS ವಾರ್ಷಿಕ ವಿಶೇಷ ಶಿಬಿರದ ಸಮಾರೋಪ….

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಅಶ್ವತ್ಥಪುರದ ವಾಣಿ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.15 ರಿಂದ 21 ರ ತನಕ ನಡೆದಿದ್ದು, ಈ ಶಿಬಿರದ ಸಮಾರೋಪ ಸಮಾರಂಭ ಇಂದು (ಮಾ.21ರಂದು) ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮಾತನಾಡಿ, ಮಾಡುವ ಕೆಲಸವನ್ನು ಪ್ರೀತಿಸುವುದರಿಂದ ಸಂತೋಷ ದೊರೆಯುತ್ತದೆ. ಅದರಲ್ಲೂ ಸಮಾಜಸೇವೆಯ ಕೆಲಸಗಳಲ್ಲಿ ಅತ್ಯಂತ ಹೆಚ್ಚು ಸಂತೋಷ-ಸಾರ್ಥಕತೆ ದೊರೆಯುತ್ತದೆ. ಶಿಬಿರಾರ್ಥಿಗಳಿಗೆ ತಮ್ಮ ಜೀವನದುದ್ದಕ್ಕೂ ಪಾಲಿಸಬೇಕಾದ ಹಲವಾರು ಜೀವನ ಮೌಲ್ಯಗಳ ಅನುಭವ ಈ ಶಿಬಿರದಿಂದಾಗಿದೆ ಎಂದರು.
ಸ್ಥಳೀಯರಾದ ಹರಿಶ್ಚoದ್ರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಈ ಶಿಬಿರದಿಂದಾಗಿ ಶಾಲೆಗೆ ಬಹಳ ಉಪಯೋಗವಾಗಿದೆ ಎಂದರಲ್ಲದೆ, ಶಿಬಿರಾರ್ಥಿಗಳಿಗೆ ತಮ್ಮ ಮುಂದಿನ ಜೀವನಕ್ಕೆ ಉಪಯೋಗವಾಗುವಂತಹ ಹಲವು ವಿಷಯಗಳನ್ನು ಕಲಿಯುವ ಅವಕಾಶ ಇದಾಗಿದೆ ಎಂದರು. ವಾಣಿ ವಿಳಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿ. ಟಿ. ಗೀತಾ ಅವರು ಶಿಬಿರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ಶ್ರೀನಿವಾಸ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಶ್ರವಣ್ ಭಂಡಾರಿ, ಶ್ರೀನಿಧಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶಿಬಿರಾರ್ಥಿಗಳಾದ ಅರ್ಚನಾ ಸ್ವಾಗತಿಸಿದರು. ಸ್ವಸ್ತಿಕ್ ಧನ್ಯವಾದ ಸಮರ್ಪಿಸಿದರು. ಆಶಿಕಾ ಕಾರ್ಯಕ್ರಮ ನಿರೂಪಿಸಿದರು.
ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸುಮಾರು 38 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿ ಪರಿಸರ ನೈರ್ಮಲ್ಯ, ಆರೋಗ್ಯ ಜಾಗೃತಿ, ವ್ಯಕ್ತಿತ್ವ ವಿಕಸನ, ವೈಜ್ಞಾನಿಕ ಅರಿವು, ಆಟದ ಮೈದಾನ ಮತ್ತು ಕೈತೋಟದ ಅಭಿವೃದ್ಧಿ, ಮಾದಕ ವ್ಯಸನದ ಜಾಗೃತಿ, ಗ್ರಾಮೀಣ ಅಭಿವೃದ್ಧಿ ಹಾಗೂ ಪ್ರಥಮ ಚಿಕಿತ್ಸೆ ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button