ಸ್ವದೇಶಿ ವಸ್ತುಗಳ ವಿನಿಮಯ ಮತ್ತು ಮಾರಾಟ – ಭಾರತೀ ಸೇವಾ ಕೇಂದ್ರ ಉದ್ಘಾಟನೆ…

ಬಂಟ್ವಾಳ: ಎಲ್ಲಾ ಸಂಪತ್ತಿಗಿಂತಲೂ ಆರೋಗ್ಯ ಭಾಗ್ಯ ಶ್ರೇಷ್ಠವಾಗಿದೆ . ಆರೋಗ್ಯಕ್ಕಾಗಿ ಉತ್ತಮ ಆಹಾರ ಮತ್ತು ಆಯುರ್ವೇದ ಪದ್ಧತಿ ಅನುಕೂಲಕರವಾಗಿದೆ ಎಂದು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‍ನ ಅಧ್ಯಕ್ಷ ನ್ಯಾಯವಾದಿ ರೋಶನ್ ಡಿಸೋಜ ಹೇಳಿದರು.
ಅವರು ಬಿ.ಸಿ.ರೊಡಿನಲ್ಲಿ ಸ್ವದೇಶಿ ವಸ್ತುಗಳ ವಿನಿಮಯ ಮತ್ತು ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ವದೇಶಿ ವಸ್ತುಗಳ ಉತ್ಪಾದನೆ ಮತ್ತು ಬಳಕೆ ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿದೆ. ನಾವು ಉಪಯೋಗಿಸುವ ಆಹಾರವೂ ಸಾತ್ವಿಕವಾಗಿರಬೇಕು ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಂಚಾಲಕ ಕೈಯೂರು ನಾರಾಯಣ ಭಟ್ ಸಂಸ್ಥೆಯನ್ನು ಉದ್ಘಾಟಿಸಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಸುಮಂಗಲ ಕ್ರೆಡಿಟ್ ಕೋ.ಅ.ಸೊಸೈಟಿ ಅಧ್ಯಕ್ಷ ನಾಗೇಶ್ ಕೆ., ಅಣ್ಣಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಮಾದಕಟ್ಟೆ ಈಶ್ವರ ಭಟ್, ಕರ್ನಾಟಕ ಚು.ಸಾ.ಪ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ , ರಾಣಿ ಅಬ್ಬಕ್ಕ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಶುಭಹಾರೈಸಿದರು. ಭಾರತಿ ಪೆರಾಜೆ ಸ್ವಾಗತಿಸಿದರು. ದಿವ್ಯಾ ವಂದಿಸಿದರು.

Sponsors

Related Articles

Back to top button