ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆಯಾದ ಅಜ್ಮಲ್ ಗೆ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸನ್ಮಾನ…

ಸುಳ್ಯ: ಪೊಲೀಸ್ ಉಪನಿರೀಕ್ಷಕ (ವಯರ್ ಲೆಸ್) ಹುದ್ದೆಗೆ ಆಯ್ಕೆಯಾದ ಸಂಪಾಜೆ ಗ್ರಾಮದ ಅಜ್ಮಲ್ ಇಬ್ರಾಹಿಂ ಇ.ಆರ್ ಅವರನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ್ ಸನ್ಮಾನಿಸಿದರು.
ಅಜ್ಮಲ್ ಅವರು ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡಿದ್ದರೂ ಪೊಲೀಸ್ ಇಲಾಖೆಯನ್ನು ಆಯ್ಕೆ ಮಾಡಿದ್ದು ನಮ್ಮ ಸಮಾಜದ ಯುವಕರಿಗೆ ಪ್ರೆರೇಪಣೆಯಾಗಿದೆ. ಮುಂದೆ ತಮ್ಮ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಟಿ.ಎಂ.ಶಾಹೀದ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ,ಕೋಶಾಧಿಕಾರಿ ಟಿ.ಎಂ.ಜಾವೇದ್ ತೆಕ್ಕಿಲ್, ಹಾಜಿ ಟಿ.ಎಂ.ಬಾಬಾ ತೆಕ್ಕಿಲ್ ,ತಾಜ್ ಮಹ್ಮದ್ ಸಂಪಾಜೆ, ಆರೀಫ್ ತೆಕ್ಕಿಲ್, ಅನ್ವರ್ ಸಾದಾತ್ ಸಂಪಾಜೆ, ಉಮ್ಮರ್ ಪೇರಡ್ಕ, ಜುನೈದ್ ,ತಾಜುದ್ದೀನ್ ಅರಂತೋಡು,ಮುನೀರ್ ಕಲ್ಲುಗುಂಡಿ,ರಿಯಾಜ್ ಕಲ್ಲುಗುಂಡಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button