ಶ್ರೀರಾಮ ಪದವಿ ಕಾಲೇಜಿನಲ್ಲಿ ಮಾಹಿತಿ ಕಾರ್ಯಗಾರ….

ಬಂಟ್ವಾಳ : ಶ್ರೀರಾಮ ಪದವಿ ಕಾಲೇಜಿನ ಐ.ಕ್ಯು.ಎ.ಸಿ ಹಾಗೂ ವೃತ್ತಿ ಮಾರ್ಗದರ್ಶನ ಘಟಕ ಇದರ ವತಿಯಿಂದ ಪದವಿಯ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿ.ಎ ಹಾಗೂ ಸಿ.ಎಸ್ಸ್ ಪರೀಕ್ಷೆಯ ಕುರಿತು ಮಾರ್ಗದರ್ಶನ ಕಾರ್ಯಕ್ರಮವು ಸೆ.25 ರಂದು ಪ್ರೇರಣಾ ಸಭಾಭವನದಲ್ಲಿ ನಡೆಯಿತು.
ಈ ಮಾಹಿತಿಯನ್ನು ಉಡುಪಿಯ ತ್ರಿಷಾ ಫೌಂಡೇಶನ್ ಇದರ ಮುಖ್ಯಸ್ಥ ಚಂದನ್ ರಾವ್ ಇವರು ಸಿ.ಎ ಹಾಗೂ ಸಿ.ಎಸ್ಸ್ ಆಗಲು ಎದುರಿಸಬೇಕಾದ ಪರೀಕ್ಷೆ, ಪರೀಕ್ಷೆಯ ಹಂತಗಳು, ಆ ಪರೀಕ್ಷೆಗೆ ಬೇಕಾದ ವಿಷಯಗಳು ಮತ್ತು ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಭವಿಷ್ಯದಲ್ಲಿ ಈ ಹುದ್ದೆಯನ್ನು ಪಡೆಯಬೇಕಾದರೆ ತಮ್ಮ ಪ್ರಯತ್ನ, ಛಲ, ಆಸಕ್ತಿಯಿಂದ ಮುನ್ನುಗ್ಗಿದರೆ ಯಶಸ್ಸನ್ನು ಕಾಣುವುದರ ಜೊತೆಗೆ, ಹುದ್ದೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಪದವಿಯ 200 ವಿದ್ಯಾರ್ಥಿಗಳು ಈ ಮಾಹಿತಿ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ತ್ರಿಷಾ ಫೌಂಡೇಶನ್‍ನ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಜಶ್ಲಿನ್ ಶರೋಷ, ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ, ಘಟಕದ ನಿರ್ದೇಶಕಿ ದೀಕ್ಷಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಕ್ಷಾ ತೃತೀಯ ಬಿ.ಕಾಂ ಸ್ವಾಗತಿಸಿ, ನಿರೂಪಿಸಿದರು. ರಶ್ಮಿತಾ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button