ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಬಗ್ಗೆ ವೃಥಾ ಆರೋಪ – ಟಿ ಎಂ ಶಾಹೀದ್ ತೆಕ್ಕಿಲ್ ಖಂಡನೆ…

ಸುಳ್ಯ: ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ನಡೆದ ಕೋಮು ಹತ್ಯಾಕಾಂಡದ ಬಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರ ಬಗ್ಗೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ನಾಯಕರು ಎಂದು ಹೇಳಿ ಪಕ್ಷಕ್ಕೆ ವಿರುದ್ಧವಾದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡುತ್ತಿರುವುದನ್ನು ಟಿ ಎಂ ಶಾಹೀದ್ ತೆಕ್ಕಿಲ್ ಖಂಡಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅದಕ್ಕೆ ಉತ್ತರವನ್ನು ಕೊಟ್ಟಿದ್ದೇನೆ. ಪ್ರಸ್ತುತ ಸನ್ನಿವೇಶದಲ್ಲಿ ಮಸೂದ್ ಅವರು ಹಲ್ಲೆಯಿಂದ ಮೃತರಾದ ವಿವರವನ್ನು, ಅವರ ಮನೆ ಸಂದರ್ಶಿಸಿದ್ದನ್ನು ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್ ಅವರ ಗಮನಕ್ಕೆ ತಂದಿದ್ದೇನೆ. ವಿಷಯ ತಿಳಿದ ತಕ್ಷಣ ನಾನು ಬೆಂಗಳೂರಿನಿಂದ ಹೊರಟು ಜಿ ಕೆ ಹಮೀದ್ ಗೂನಡ್ಕ, ಸಿದ್ದೀಕ್ ಕೋಕೋ ಜೊತೆ ರಾತ್ರಿ ಒಂದು ಘಂಟೆಗೆ ಸದ್ರಿಯವರ ದಫನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮರು ದಿನ ಜುಮಾ ನಮಾಜಿನ ಬಳಿಕ ಪ್ರಥಮವಾಗಿ ಅವರ ಮನೆಗೆ ಭೇಟಿ ನೀಡಿ ಎಲ್ಲಾ ವಿಚಾರವನ್ನು ಅವರ ಮಾವಂದಿರಿಗೆ ಸಹೋದರನಿಗೆ ವಿವರಿಸಿದ್ದೇನೆ. ಅಲ್ಲದೆ ಅವರ ಸಹೋದರ ಹೆಸರಲ್ಲಿ ಒಂದು ಖಾತೆಯನ್ನು ತೆರೆದು ಮಸೀದಿಯ ಸಹಕಾರ ಮತ್ತು ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಿ ಎಂದೂ, ಯಾವುದೇ ಧಾರ್ಮಿಕ, ರಾಜಕೀಯ ಸಂಘಟನೆ ಹೆಸರಲ್ಲಿ ಗುರುತಿಸಬೇಡಿ ಎಂದೂ ವಿನಂತಿಸಿದ್ದೇನೆ. ಸ್ಥಳೀಯ ಮಸೀದಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಸ್ಪತ್ರೆಯಲ್ಲಿ ನಮ್ಮ ಪಕ್ಷದ ನಾಯಕರುಗಳಾದ ಯು ಟಿ ಖಾದರ್, ಮುಸ್ತಫ, ಗಫೂರ್, ಇಸ್ಮಾಯೀಲ್ ಮೊದಲಾದವರು ಅಲ್ಲೇ ಇದ್ದು ಎಲ್ಲಾ ರೀತಿಯ ಸಹಾಯ ಸಹಕಾರ ಮಾಡಿದ್ದಾರೆ. ಅನಂತರ ಪ್ರವೀಣ ಅವರ ಹತ್ಯೆಗೈದಿರುವ ವಿಷಯದಲ್ಲಿ ರಾಷ್ಟ್ರಾದ್ಯಂತ ಚರ್ಚೆ ಆದಾಗ ಮಾಧ್ಯಮ ಖಂಡನೆ ವ್ಯಕ್ತಪಡಿಸಿದ್ದೇನೆ. ಫಾಸಿಲ್ ಹತ್ಯೇ ಆದಾಗ ಅದೇ ರೀತಿ ಆಗಿದ್ದೂ ಹೆಚ್ಹು ಪ್ರಚಾರಕ್ಕೆ ಬಂದಿದೆ ವಿನಃ ಮಸೂದ್ ಹತ್ಯೆ ಯನ್ನೂ ಅಷ್ಟರವರೆಗೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಈಗ ಮೂರು ಹತ್ಯೆಗಳ ಬಗ್ಗೆ ವ್ಯಾಪಕ ಚರ್ಚೆ ಪ್ರಚಾರ ಆಗುತ್ತಿದ್ದು ಈ ಸಂದರ್ಭಗಳಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ತೇಜೋವಧೆ ಮಾಡಲು ಎಡ ಕೋಮುವಾದಿ ಪಕ್ಷ ಮತ್ತು ಬಲ ಕೋಮುವಾದಿ ಪಕ್ಷ ಕೈಜೋಡಿಸಿದ್ದು ವ್ಯಾಪಕ ಅಪಪ್ರಚಾರ ಮಾಡುತ್ತಿದ್ದಾರೆ. ಈ ಷಡ್ಯಂತರಕ್ಕೆ ಕಾಂಗ್ರೇಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು, ನಾಯಕರು ಬಲಿಯಾಗಬಾರದೆಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ವಿನಂತಿಸಿದ್ದಾರೆ.
ಎಲ್ಲರೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಸುಂದರ ಸಮಾಜ ನಿರ್ಮಿಸುವ ಪ್ರಯತ್ನವನ್ನು ಮಾಡುವುದು ಬಿಟ್ಟು ಯಾರನ್ನೋ ದೂಡಿ ಮಳೆ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮತ್ತು ರಾಜಕೀಯ ಮಾಡಬೇಡಿ ಎಂದು ಅವರು ವಿನಂತಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ಮುಸಲ್ಮಾನರನ್ನು ದೂರಿದಾಗ, ಕೋರೋನ ಸಂದರ್ಭದಲ್ಲಿ ದೇಶದಲ್ಲೇ ಸಂಘಪರಿವಾರ ಮುಸಲ್ಮಾನರನ್ನು ಅವಹೇಳನ ಮಾಡಿದಾಗ ಅಲ್ಪಸಂಖ್ಯಾತರ ಪರವಾಗಿ ಗಟ್ಟಿ ದ್ವನಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮಾತನಾಡಿ ಧೈರ್ಯ ತುಂಬಿದ ರೀತಿ ಶ್ಲಾಘನೀಯ. ಅವರ ಅಲ್ಪಸಂಖ್ಯಾತರ ಕಾಳಜಿಯನ್ನು ಪ್ರಶ್ನಿಸುವ ಹಕ್ಕು ಕೋಮುವಾದಿಗಳಿಗೆ ಇಲ್ಲ. ಅವರೊಬ್ಬ ನೈಜ ಜಾತ್ಯತೀತ ನಾಯಕ ಎಂದು ಟಿ ಎಂ ಶಾಹೀದ್ ತೆಕ್ಕಿಲ್ ಬಿಜೆಪಿ ಮತ್ತು ಎಸ್ ಡಿ ಪಿ ಐ ವಿರುದ್ದ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯ , ಬಿ ಕೆ ಹರಿಪ್ರಸಾದ್ ಸಹಿತ ಇಂತಹ ಹಲವು ನಾಯಕರನ್ನು ಕಾಂಗ್ರೇಸ್ ಪಕ್ಷದಲ್ಲಿ ಮಾತ್ರ ಕಾಣಲು ಸಾಧ್ಯ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಟಿ ಎಂ ಶಾಹೀದ್ ತೆಕ್ಕಿಲ್

Sponsors

Related Articles

Back to top button