ಬಂಧಿತ NSUI ವಿದ್ಯಾರ್ಥಿ ನಾಯಕರನ್ನು ಶೀಘ್ರ ಬಿಡುಗಡೆಗೊಳಿಸಿ- ಉಬೈಸ್ ಗೂನಡ್ಕ ಆಗ್ರಹ…

ಸುಳ್ಯ: ಶಿಕ್ಷಣವನ್ನು ಕೇಸರಿಕರಣ ಮಾಡುತ್ತಿರುವುದನ್ನು ವಿರೋಧಿಸಿ NSUI ರಾಜ್ಯ ಅಧ್ಯಕ್ಷ ಕೀರ್ತಿಗಣೇಶ್ ಅವರು ಮತ್ತು ಕಾರ್ಯಕರ್ತರು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವಾಗ ಪೋಲಿಸರಿಂದ ವಿಧ್ಯಾರ್ಥಿಗಳ ಮೇಲೆ ಹಲ್ಯೆ ಮಾಡಿ ಬಂಧಿಸಿದ್ದಾರೆ. ಸರ್ಕಾರದ ಈ ವಿಧ್ಯಾರ್ಥಿ ವಿರೋಧಿ ನೀತಿಯ ಖಂಡನೀಯ. ಪೌರತ್ವ, ಜಾತ್ಯತೀತತೆ ಅಧ್ಯಾಯಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ. ಇದನ್ನು ವೀರೋಧಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ಅದನ್ನು ಹತ್ತಿಕ್ಕಲು ಹೊರಟಿರುವ ಕೋಮುವಾದಿ ಬಿಜೆಪಿ ಸರಕಾರವನ್ನು ಪ್ರಶ್ನಿಸುವುದೇ ತಪ್ಪಾ? 24 ಗಂಟೆಯ ಒಳಗೆ ನಮ್ಮ ನಾಯಕರಾದ ಕೀರ್ತಿ ಗಣೇಶ್ ಮತ್ತು NSUI ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ವಜಾ ಗೊಳಿಸಬೇಕು. ಇಲ್ಲದಿದ್ದರೆ ಉಗ್ರ ರೀತಿಯ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಸುಳ್ಯ ತಾಲೂಕು NSUI ಕಾರ್ಯದರ್ಶಿಯಾದ ಉಬೈಸ್ ಗೂನಡ್ಕ ಅವರು ತಿಳಿಸಿದ್ದಾರೆ.

Sponsors

Related Articles

Back to top button