ಗೋವಾದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ನಟಿ ಪೂನಂ ಪಾಂಡೆ ವಿರುದ್ಧ ಎಫ್ಐಆರ್…
ಗೋವಾ: ಗೋವಾ ಫಾರ್ವರ್ಡ್ ಪಕ್ಷದ ಮಹಿಳಾ ವಿಭಾಗವು ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ನಟಿ ಪೂನಂ ಪಾಂಡೆ ವಿರುದ್ಧ ದೂರು ದಾಖಲಿಸಿದೆ.
ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಕ್ಕಾಗಿ ಇನ್ನೋರ್ವ ಅನಾಮಿಕ ವ್ಯಕ್ತಿಯ ವಿರುದ್ಧ ಮತ್ತೊಂದು ಎಫ್ಐಆರ್ ಕೂಡ ದಾಖಲಿಸಲಾಗಿದೆ. ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜಲ ಸಂಪನ್ಮೂಲ ಇಲಾಖೆಯ ಉಪವಿಭಾಗ- 2ರ ಸಹಾಯಕ ಎಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ, ಐಪಿಸಿಯ ಸೆಕ್ಷನ್ 294 ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಸಿಂಗ್ ಏಶಿಯನ್ ನ್ಯೂಸ್ ಇಂಟರ್ ನ್ಯಾಷನಲ್ (ANI) ಗೆ ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಜಲಸಂಪನ್ಮೂಲ ಸಚಿವ ಫಿಲಿಪೆ ನೆರಿ ರೊಡ್ರಿಗಸ್ ಅವರ ರಾಜೀನಾಮೆಗೆ ಗೋವಾ ಫಾರ್ವರ್ಡ್ ಪಕ್ಷದ ಉಪಾಧ್ಯಕ್ಷ ಮತ್ತು ವಕ್ತಾರ ದುರ್ಗದಾಸ್ ಕಾಮತ್ ಒತ್ತಾಯಿಸಿದ್ದಾರೆ. ಪೂನಂ ಪಾಂಡೆ ಅವರ ವೀಡಿಯೊ ಗೋವಾದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಕೆನಕೋನಾದ ಚಾಪೋಲಿ ಅಣೆಕಟ್ಟಿನಲ್ಲಿ ಚಿತ್ರೀಕರಿಸಲಾಗಿದೆ. ಇದು ಗೋವಾ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಆಸ್ತಿಯಾಗಿದೆ. ಚಿತ್ರೀಕರಣಗಳಿಗೆ ಸಾಮಾನ್ಯವಾಗಿ ಗೋವಾ ಮನರಂಜನಾ ಸೊಸೈಟಿ (ESG) ಅನುಮತಿ ನೀಡುತ್ತದೆ. ಮುಖ್ಯಮಂತ್ರಿಯವರೇ ಈ ಸೊಸೈಟಿ ಯ ಅಧ್ಯಕ್ಷರಾಗಿದ್ದಾರೆ. ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರವು ಗೋವಾವನ್ನು ಅಶ್ಲೀಲ ತಾಣವಾಗಿ ಪ್ರಚಾರ ಮಾಡುತ್ತಿದೆ, ಇದು ರಾಜ್ಯಕ್ಕೆ ಕೆಟ್ಟ ಹೆಸರನ್ನು ತರುತ್ತಿದೆ ಎಂದು ಕಾಮತ್ ಏಶಿಯನ್ ನ್ಯೂಸ್ ಇಂಟರ್ ನ್ಯಾಷನಲ್ ಗೆ ತಿಳಿಸಿದ್ದಾರೆ.