ನರಿಕೊಂಬು ಹಿರಿಯ ಪ್ರಾಥಮಿಕ ಶಾಲೆ -ಅತ್ಯುತ್ತಮ‌ ಎಸ್.ಡಿ.ಎಂ.ಸಿ. ಪ್ರಶಸ್ತಿ…

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ‌ ಎಸ್.ಡಿ.ಎಂ.ಸಿ. ಪ್ರಶಸ್ತಿಗೆ ನರಿಕೊಂಬು ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಆಯ್ಕೆಯಾಗಿದ್ದು, ಇತ್ತೀಚೆಗೆ ನೇರಳಕಟ್ಟೆಯಲ್ಲಿ ನಡೆದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನರಿಕೊಂಬು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಸ್ವೀಕರಿಸಿದರು.
ಸರ್ಕಾರಿ ಶಾಲೆಯನ್ನು ಮಾದರಿಯಾದ ರೀತಿಯಲ್ಲಿ‌ ಅಭಿವೃದ್ದಿ ಗೊಳಿಸಿರುವುದು ಹಾಗೂ ಎಸ್ ಡಿ.ಎಂಸಿಯ ಕ್ರಿಯಾಶೀಲತೆಗೆ ಈ ಪ್ರಶಸ್ತಿ‌ ನೀಡಲಾಗಿದೆ. ಎಸ್.ಡಿ.ಎಂ.ಸಿ ಗೆ ದೊರೆತ ಪ್ರಶಸ್ತಿಯನ್ನು ಶಾಲೆಗೆ ಅರ್ಪಿಸುವ ಕಾರ್ಯಕ್ರಮವೂ ಅರ್ಥಪೂರ್ಣವಾಗಿ ನಡೆದಿದ್ದು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್ ನೇತೃತ್ವದಲ್ಲಿ ಸರ್ವ ಸದಸ್ಯರು ಶಾಲೆಗೆ ಆಗಮಿಸಿ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.
ಪ್ರಶಸ್ತಿ ಪುರಸ್ಕೃತ ಎಸ್ ಡಿಎಂಸಿ ಯನ್ನು ಬ್ಯಾಂಡ್ ವಾದ್ಯದ ಘೋಷಣೆಗಳೊಂದಿಗೆ ಶಾಲೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವೃಂದ ಸ್ವಾಗತಿಸಿ, ಪುಷ್ಪ ಸಿಂಚನದೊಂದಿಗೆ ವೇದಿಕೆಗೆ ಬರಮಾಡಿಕೊಂಡ ಕ್ಷಣ ಆತ್ಮೀಯತೆಯ ಜೊತೆಗೆ ಭಾವನಾತ್ಮಕವಾಗಿತ್ತು.
ಈ ಸಂದರ್ಭದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್, ಉಪಾಧ್ಯಕ್ಷೆ ಶ್ರೀಮತಿ ಯಶೋಧ, ತಾಯಂದಿರ ಸಮಿತಿಯ ಅಧ್ಯಕ್ಷೆ, ನರಿಕೊಂಬು ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಉಷಾಲಾಕ್ಷಿ, ತಾಯಂದಿರ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಮೇಘ, ಶಾಲಾ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಶಾಲೆಯ ಪೋಷಕ ಬಂಧುಗಳು, ವಿದ್ಯಾರ್ಥಿ ಸಮೂಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Sponsors

Related Articles

Back to top button