ಪೇರಡ್ಕದಲ್ಲಿ ದಿಢೀರ್ ಪ್ರವಾಹ ದರ್ಗಾ, ತೋಟಕ್ಕೆ ನುಗ್ಗಿದ ನೀರು- ಮುಕ್ತಿಗಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ…

ಸುಳ್ಯ: ಕೊಯನಾಡು ದಬ್ಬಡ್ಕದಲ್ಲಿ ಉಂಟಾದ ಜಲಸ್ಫೋಟದಿಂದ ಸಂಪಾಜೆ ಗ್ರಾಮದ ಪೇರಡ್ಕದಲ್ಲಿ ದಿಡೀರ್ ಪ್ರವಾಹದಿಂದ ದರ್ಗಾ ಶರೀಫ್ ,ಟಿ.ಎಂ ಶಾಹಿದ್ ತೆಕ್ಕಿಲ್ ರವರ ತೋಟ, ಸಫಿಯರ ಮನೆ ಮತ್ತು ತೋಟ, ಸತ್ಯಜಿತ್ ಹಾಗು ಲಕ್ಷ್ಮೀಶರವರ ತೋಟ, ಕೆ.ಎಂ.ಮೂಸಾನ್ರವರ ತೋಟಗಳು ಜಲಾವೃತಗೊಂಡಿತು. ಈ ಪ್ರದೇಶಕ್ಕೆ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ಭೇಟಿ ನೀಡಿ ಸ್ಥಳ ಪರಿಶೀಲಿದರು.
ಈ ಪ್ರದೇಶದಲ್ಲಿ ನಿರಂತರ ಸಂಭವಿಸುವ ನೆರೆಯಿಂದ ಮುಕ್ತಿಯಾಗಲು ಪೇರಡ್ಕ ದರ್ಗಾ ಶರೀಫ್ ನಲ್ಲಿ ಸ್ಥಳೀಯ ಖತೀಬರಾದ ಬಹು ರಿಯಾಜ್ ಫೈಝಿ ಎಮ್ಮೆಮಾಡುರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟಿ.ಎಂ ಶಾಹಿದ್ ತೆಕ್ಕಿಲ್ ರೊಂದಿಗೆ ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ , ಸಹಾಯಕ ಅಧ್ಯಾಪಕ ನೂರುದ್ದೀನ್ ಮುಸ್ಲಿಯಾರ್ , ಮಸೀದಿಯ ಕಾರ್ಯದರ್ಶಿ ಟಿ.ಎಂ ಅಬ್ದು ಲ್ ರಝಾಕ್ ಹಾಜ ತೆಕ್ಕಿಲ್, ತೆಕ್ಕಿಲ್ ಮೊಹಮ್ಮದ್ ಕುಂಞ ಪೇರಡ್ಕ, ಟಿ.ಬಿ. ಅಬ್ದುಲ್ಲಾ ತೆಕ್ಕಿಲ್, ರಹೀಮ್ ಬೀಜದಕಟ್ಟೆ, ಅಶ್ರಫ್ ತೆಕ್ಕಿಲ್ ಪೇರಡ್ಕ, ಜುರೈದ್ ತೆಕ್ಕಿಲ್ ಪೇರಡ್ಕ, ಸಾಧುಮಾನ್ ತೆಕ್ಕಿಲ್ ಪೇರಡ್ಕ, ಕೆ.ಎಂ ಮೂಸಾನ್ ಪೇರಡ್ಕ, ಕೆ.ಎಂ ಇಸ್ಮಾಯಿಲ್ , ಉಸ್ಮಾನ್ ಅರಂತೋಡು,ಹಾಫಿಳ್ ಪೇರಡ್ಕ,ತಾಜುದ್ದೀನ್ ತೆಕ್ಕಿಲ್, ಮಿಸ್ಬಾ ಅರಂತೋಡು , ಆರಿಫ್ ತೆಕ್ಕಿಲ್ ದರ್ಖಾಸ್ , ಸೊಹೈಲ್, ಇರ್ಫಾನ್ ಪೇರಡ್ಕ ಮೊದಲಾದವರಿದ್ದರು.

Sponsors

Related Articles

Back to top button