ಶುಕ್ರವಾರ – ದ.ಕ 202 , ಉಡುಪಿ 278 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಶುಕ್ರವಾರ) ದ.ಕ ಜಿಲ್ಲೆಯಲ್ಲಿ 202 , ಉಡುಪಿ 278 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 202 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9914 ಕ್ಕೆ ಏರಿಕೆಯಾಗಿದೆ.ಇಂದು 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 301 ಕ್ಕೆ ಏರಿಕೆಯಾಗಿದೆ. ಇಂದು 64 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2420 ಸಕ್ರಿಯ ಪ್ರಕರಣಗಳಿವೆ. 202 ಪ್ರಕರಣಗಳ ಪೈಕಿ 139 ಪ್ರಕರಣಗಳು ಮಂಗಳೂರಿನಿಂದ, 35 ಪ್ರಕರಣಗಳು ಬಂಟ್ವಾಳದಿಂದ, 11 ಪ್ರಕರಣಗಳು ಪುತ್ತೂರಿನಿಂದ, 3 ಪ್ರಕರಣಗಳು ಸುಳ್ಯದಿಂದ , 4 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 10 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 278 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ‌ ಸಂಖ್ಯೆ 9661 ಕ್ಕೆ ಏರಿಕೆಯಾಗಿದೆ. ಇಂದು ಇಬ್ಬರು ಸಾವನಪ್ಪಿದ್ದಾರೆ. ಕುಂದಾಪುರ ತಾಲೂಕಿನ 61ವರ್ಷದ ವೃದ್ಧ ಹಾಗೂ ಉಡುಪಿ ತಾಲೂಕಿನ 80 ವರ್ಷದ ವೃದ್ಧ ಕೋವಿಡ್ ನಿಂದ ಸಾವನಪ್ಪಿದವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ 82 ಮಂದಿ ಸಾವನಪ್ಪಿದ್ದಾರೆ. ಇಂದು 365 ಮಂದಿ ಡಿಸ್ಜಾರ್ಜ್ ಆಗಿದ್ದು ಈವರೆಗೆ 6857 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2729 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Leave a Reply

Your email address will not be published. Required fields are marked *

Back to top button