ಸುದ್ದಿ

ಶುಕ್ರವಾರ – ದ.ಕ 307 , ಉಡುಪಿ 322 ರಾಜ್ಯದಲ್ಲಿ 7908 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಶುಕ್ರವಾರ ದ.ಕ ಜಿಲ್ಲೆಯಲ್ಲಿ 307 , ಉಡುಪಿ 322 ಹಾಗೂ ರಾಜ್ಯದಲ್ಲಿ 7908 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಶುಕ್ರವಾರ ಈವರೆಗಿನ ಅತೀ ಹೆಚ್ಚು ಅಂದರೆ 307 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8378 ಕ್ಕೆ ಏರಿಕೆಯಾಗಿದೆ.ಇಂದು 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 256 ಕ್ಕೆ ಏರಿಕೆಯಾಗಿದೆ. ಇಂದು 242 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2007 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರದ ಪ್ರಕರಣಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 44 ಮಂದಿಗೆ ಸೋಂಕು ಹರಡಿದೆ. 130 ILI ಪ್ರಕರಣಗಳಾಗಿದ್ದು, 9 SARI ಪ್ರಕರಣಗಳಾಗಿವೆ. 124 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಬೇಕಾಗಿದೆ. 307 ಪ್ರಕರಣಗಳಲ್ಲಿ 197 ಪ್ರಕರಣ ಮಂಗಳೂರು, 57 ಪ್ರಕರಣ ಬಂಟ್ವಾಳ, ತಲಾ 14 ಪ್ರಕರಣಗಳು ಪುತ್ತೂರು ಹಾಗೂ ಬೆಳ್ತಂಗಡಿ, 17 ಪ್ರಕರಣಗಳು ಸುಳ್ಯ ಮತ್ತು 8 ಪ್ರಕರಣಗಳು ಬೇರೆ ಜಿಲ್ಲೆಯದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 322 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7490 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2550 ಸಕ್ರಿಯ ಪ್ರಕರಣಗಳಿವೆ
ಶುಕ್ರವಾರ ರಾಜ್ಯದಲ್ಲಿ 7,908 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,11,108ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೋನಾದಿಂದಾಗಿ ಇಂದು 104 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,717ಕ್ಕೆ ಏರಿಕೆಯಾಗಿದೆ.

Related Articles

Leave a Reply

Your email address will not be published.

Back to top button