ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮತ್ತು HTTI ಸಂಸ್ಥೆಗಳ ನಡುವೆ MoU ಒಪ್ಪಂದ….

ಪುತ್ತೂರು: ಇಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಹೊರಬರುವ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ದರಾಗುವಂತೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಮಂಗಳೂರಿನ ಹೆಬಿಕ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಇದರ ನಡುವೆ ಕೌಶಲ ಅಭಿವೃದ್ಧಿಯ ಪ್ರಾಯೋಗಿಕ ತರಬೇತಿ, ಇಂಟರ್ನ್‍ಶಿಪ್, ಪ್ರಾಜೆಕ್ಟ್ ವರ್ಕ್ ಮತ್ತು ಯಾಂತ್ರಿಕ ಭಾಗಗಳ ತಯಾರಿಕೆಗೆ ಸಹಭಾಗಿತ್ವವನ್ನು ನೀಡುವ ಬಗ್ಗೆ ತಿಳುವಳಿಕೆ ಒಪ್ಪಂದಕ್ಕೆ (MoU ) ಸಹಿ ಹಾಕಲಾಯಿತು.
ಸುಧಾರಿತ ತಾಂತ್ರಿಕ ಕೌಶಲಗಳ ತರಬೇತಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪಠ್ಯಕ್ರಮಕ್ಕೆ ಅನುಗುಣವಾಗಿ 4 ವಾರಗಳ ಇಂಟರ್ನ್‍ಶಿಪ್ ತರಬೇತಿ, ಸಾಂಪ್ರದಾಯಿಕ ಯಂತ್ರಗಳೊಂದಿಗೆ ನೂತನ ತಂತ್ರಜ್ಞಾನದ ಸುಧಾರಿತ ಯಂತ್ರಗಳ ಬಳಕೆ, ಸಿಎನ್‍ಸಿ ಮೆಶಿನ್‍ಗಳ ಬಳಕೆಯ ಬಗ್ಗೆ ನುರಿತ ತರಬೇತುದಾರರಿಂದ ತರಗತಿಗಳು, ಪ್ರಾಜೆಕ್ಟ್ ವರ್ಕ್ ಗೆ ಬೇಕಾದ ಯಾಂತ್ರಿಕ ಭಾಗಗಳ ಸ್ವಯಂ ತಯಾರಿ ಮುಂತಾದ ವಿಷಯಗಳು ಒಪ್ಪಂದದಲ್ಲಿ ಸೇರಿಕೊಂಡಿವೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಮತ್ತು ಹೆಬಿಕ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನ ಪ್ರಾಂಶುಪಾಲ ಪ್ರೊ.ಚೇತನ್.ಆರ್ ಒಪ್ಪಂದಕ್ಕೆ ಸಹಿ ಹಾಕಿದರು. ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ರಾಧಾಕೃಷ್ಣ ಭಕ್ತ, ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ಡಾ.ದೀಪಕ್.ಕೆ.ಬಿ ಹಾಗೂ ಕೆಎಸಿಇಎಸ್ ನ ಕಾರ್ಯದರ್ಶಿ ಡಾ.ಎಚ್.ಎಂ.ವಾಟ್ಸನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button