ಸುಳ್ಯ ರೋಟರಿ ವತಿಯಿಂದ ಹದಿಹರೆಯದ ಸಮಸ್ಯೆ ಕಾರ್ಯಾಗಾರ….
ಸುಳ್ಯ: ರೋಟರಿ ಕ್ಲಬ್ ಸುಳ್ಯ, ಇನ್ನರ್ ವೀಲ್ ಕ್ಲಬ್ ಸುಳ್ಯ ಹಾಗೂ ಬೆಲ್ಲ ಹೆಲ್ತ್ ಕೇರ್ ಫ್ರೈವೇಟ್ ಲಿಮಿಟೆಡ್ ಕಂಪೆನಿ ಸಹಯೋಗದೊಂದಿಗೆ ಸರಕಾರಿ ಪ್ರೌಡಶಾಲೆ ಎಲಿಮಲೆ, ಸವೇರಪುರ ಇಂಗ್ಲಿಷ್ ಮೀಡಿಯಮ್ ಪ್ರೌಡಶಾಲೆ ಕಲ್ಲುಗುಂಡಿ, ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯದಲ್ಲಿ ಹೆಣ್ಣುಮಕ್ಕಳಿಗೆ ಹದಿಹರೆಯದ ಸಮಸ್ಯೆ ಹಾಗೂ ಮುಟ್ಟಿನ ನೈರ್ಮಲ್ಯದ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡಲಾಯಿತು.
ಎಲಿಮಲೆಯಲ್ಲಿ ರೊ. ಚಂದ್ರಶೇಖರ್ ಪೇರಾಲ್ ರವರು ಕಾರ್ಯಕ್ರಮದ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಅಧ್ಯಕ್ಷ ರೊ. ಡಾ. ಪುರುಷೋತ್ತಮ್ ಕೆ.ಜಿ. ವಹಿಸಿದ್ದರು. ವೇದಿಕೆಯಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಡಾ. ಹರ್ಷಿತಾ ಪುರುಷೋತ್ತಮ್, ಜಯಮಣಿ ಮಾಧವ, ರೋಟರಿ ವಿನ್ಸ್‍ನ ಜಿಲ್ಲಾ ಕಾರ್ಯದರ್ಶಿ ರೊ. ವಿಕ್ರಮ್ ದತ್ತ, ರೋಟರಿ ಮಂಗಳೂರು ಮೆಟ್ರೋ ಅಧ್ಯಕ್ಷ ನಿತಿನ್ ಕಾಮತ್ ಉಪಸ್ಥಿತರಿದ್ದರು. ಕಲ್ಲುಗುಂಡಿಯಲ್ಲಿ ರೆ. ಫಾದರ್ ನವೀನ್ ಕಾರ್ಯಕ್ರಮದ ಚಾಲನೆ ನೀಡಿದರು ಹಾಗೂ ಸುಳ್ಯದಲ್ಲಿ ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕಾರ್ಯಕ್ರಮದ ಚಾಲನೆ ನೀಡಿದರು. ವೇದಿಕೆಯಲ್ಲಿ ರೊ. ಲತಾ ಮಧುಸೂದನ್ ಹಾಗೂ ರೊ. ಆನಂದ ಖಂಡಿಗ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಬೆಲ್ಲ ಹೆಲ್ತ್ ಕೇರ್ ಫ್ರೈವೇಟ್ ಲಿಮಿಟೆಡ್ ಕಂಪೆನಿಯ ಮೇರಿ ಪಾಯಸ್ ರವರು ಕಾರ್ಯಾಗಾರ ನಡೆಸಿಕೊಟ್ಟರು.