SSLC ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿನಿ ಶೀಬಾ ಅವರಿಗೆ ಸನ್ಮಾನ…

ಸುಳ್ಯ: ಮಲೆನಾಡು ಚಾರಿಟೇಬಲ್ ಟ್ರಸ್ಟ್ ಹಾಗೂ ಹಾಗೂ ಸ್ಥಳೀಯ ನಗರ ಪಂಚಾಯತ್ ನಾವುರು ವಾರ್ಡ್ ಸದಸ್ಯರ ವತಿಯಿಂದ ಸುಳ್ಯ ತಾಲೂಕು SSLC ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ಶೀಬಾ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮುಸ್ತಫ ಕೆ ಎಂ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್, ನಿರ್ದೇಶಕರುಗಳಾದ ಖಾಲಿದ್ ಬೀಜಕೊಚ್ಚಿ, ಇಬ್ರಾಹಿಂ ಕೆ ಬಿ , ಸಿದ್ಧಿಕ್ ಕೋಕೋ , ಹನೀಫ್ ಬೀಜಕೊಚ್ಚಿ , ಶಿಹಾಬ್ ಕೇರ್ಪಳ , ಫಮಿದ ಸಂಶುದ್ದೀನ್ ಉಪಸ್ಥಿತರಿದ್ದರು.

Sponsors

Related Articles

Back to top button