ನ.20 : KCF – INC ಸಮಿತಿಯಿಂದ ಗ್ರಾಂಡ್ ಮೀಲಾದ್ ಕಾರ್ಯಕ್ರಮ…

ಓಮನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅತ್ಯುನ್ನತ ಘಟಕವಾದ ಅಂತರ್ ರಾಷ್ಟ್ರೀಯ ಸಮಿತಿಯಿಂದ ನವೆಂಬರ್ 20 ರಂದು ಭಾರತದ ಸಮಯ ರಾತ್ರಿ 7.30 ಕ್ಕೆ ಝೂಮ್ ಅಪ್ಲಿಕೇಶನ್ ಮೂಲಕ ಗ್ರಾಂಡ್ ಮೀಲಾದ್ ಸಮಾವೇಶ ಹಾಗೂ ತಾಜುಲ್ ಉಲಮಾ & ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ಮುಸಲ್ಮಾನರ ಅಧಿಕೃತ ಶಬ್ದವಾದ ಬಾರತದ ಗ್ರಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರು ಭಾಗವಹಿಸಲಿದ್ದಾರೆ.

ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೌಫಲ್ ಸಖಾಫಿ ಕಳಸ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.

ಸದ್ರಿ ಕಾರ್ಯಕ್ರಮದಲ್ಲಿ ಡಾ| ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವೀ ಕಾವಳಕಟ್ಟೆ, ಡಾ| ಅಬ್ದುರ್ರಶೀದ್ ಝೈನಿ, ಶಾಫೀ ಸಅದಿ ಬೆಂಗಳೂರು, ಸುಫ್ಯಾನ್ ಸಖಾಫಿ, ಖಮರುದ್ದೀನ್ ಗೂಡಿನಬಳಿ, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಇತರ ಉಲಮಾ ಹಾಗೂ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಉಸ್ತುವಾರಿಯಾದ ಎಸ್ ಪಿ ಹಂಝಾ ಸಖಾಫಿ ಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಝೋಮ್ ಲಿಂಕ್: https://us02web.zoom.us/j/87079733818?pwd=Y1diZGVlNENZYUFQaW9PN1NtV3pTdz09

Sponsors

Related Articles

Leave a Reply

Your email address will not be published. Required fields are marked *

Back to top button