ಮರಕಡ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಸ್ವಾಮೀಜಿ ದೇಹ ತ್ಯಾಗ…

ಮಂಗಳೂರು: ಮರಕಡ ಗುರು ಪರಾಶಕ್ತಿ ಮಠದ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿಯವರು ನಿನ್ನೆ ರಾತ್ರಿ 10.40 ಕ್ಕೆ ತಮ್ಮ ದೇಹ ತ್ಯಾಗ ಮಾಡಿದರೆಂದು ಮಠದ ಪ್ರಕಟಣೆ ತಿಳಿಸಿದೆ.
ಶ್ರೀ ನರೇಂದ್ರನಾಥ ಸ್ವಾಮೀಜಿಯವರು ಮರಕಡದಲ್ಲಿ ಬೃಹತ್ ಆದಿಶಕ್ತಿ ದೇವಾಲಯವನ್ನು ನಿರ್ಮಿಸಿದ್ದು, ಫೆಬ್ರವರಿ ತಿಂಗಳಲ್ಲಿ ಈ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಿದ್ದರು.
ಸ್ವಾಮೀಜಿ ಅವರ ಹಠಾತ್ ನಿಧನದಿಂದ ಅಪಾರ ಸಂಖ್ಯೆಯ ಶಿಷ್ಯವರ್ಗ ಶೋಕ ಸಾಗರದಲ್ಲಿ ಮುಳುಗಿಸಿದೆ. ಇಂದು ಭಕ್ತಾದಿಗಳಿಗೆ ಶ್ರೀ ಮರಕಡ ಕ್ಷೇತ್ರದಲ್ಲಿ ಗುರುಗಳ ದರ್ಶನಕ್ಕೆ ಅವಕಾಶದ ನಂತರ ಮಡ್ಯಾರು ಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಸಮಾಧಿ ಕ್ರಿಯೆಯು ನಡೆಯಲಿರುವುದು.

Sponsors

Related Articles

Back to top button