ನಾಡಿನ ಸಮಸ್ತ ನಾಗರಿಕರಿಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳು – ಟಿ. ಎಂ. ಶಾಹಿದ್ ತೆಕ್ಕಿಲ್…

ಸುಳ್ಯ: ಮುಸ್ಲಿಂ ಬಾಂದವರು ಕೋವಿಡ್ 19 ರ ಹಿನ್ನಲೆಯಲ್ಲಿ ಈ ಸಲ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಮನೆಯಲ್ಲೇ ಇದ್ದು ಈದ್ ನಮಾಜ್ ಅನ್ನು ನಿರ್ವಹಿಸಬೇಕು ಮತ್ತು ಸಾಮಾಜಿಕ ಅಂತರ ವನ್ನು ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ನ್ನು ಉಪಯೋಗಿಸಬೇಕು.ಆಗಾಗ ಕೈ ಗಳನ್ನು ತೊಳೆದುಕೊಂಡು ಶುಚಿತ್ವವನ್ನು ಕಾಪಾಡಬೇಕು. ಆಲಿಂಗನ ಮೂಲಕ ಶುಭಾಶಯವನ್ನು ಮಾಡುವುದು ಒಳ್ಳೆಯದಲ್ಲ ಎಂದು ಕೆ. ಪಿ. ಸಿ. ಸಿ ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್ ವಿನಂತಿಸಿರುತ್ತಾರೆ. ನಾಡಿನ ಜನತೆ ಶಾಂತಿ ಸೌಹಾರ್ಧತೆ ಇದ್ದು ಈದುಲ್ ಫಿತ್ರ್ ಹಬ್ಬವು ಎಲ್ಲರಿಗೂ ಸಮೃದ್ಧಿ ಮತ್ತು ಸುಖ ಸಂಪತ್ತನ್ನು ನೀಡಲಿ ಎಂದು ಅವರು ಹಾರೈಸಿರುತ್ತಾರೆ.

Sponsors

Related Articles

Leave a Reply

Your email address will not be published. Required fields are marked *

Back to top button