ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ – ಪ್ರತಿಭಾ ಪುರಸ್ಕಾರ…

ಬಂಟ್ವಾಳ: ಸೆ. 25ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
2020-21ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದ ವಿದ್ಯಾರ್ಥಿನಿ ಕುಮಾರಿ ಮೇಘ ಇವರನ್ನು ಶಾಲು ಹೊದಿಸಿ, ಫಲಪುಷ್ಪದೊಂದಿಗೆ ಸನ್ಮಾ ನಿಸ ಲಾಯಿತು. ವಿಶೇಷ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕ ರಕ್ಷಕ ಸಂಘದ ಪರವಾಗಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆ ಆಡಳಿತಾಧಿಕಾರಿ ಸಿ.ಶ್ರಿಧರ್ ,‌”ಏಕಾಗ್ರತೆಯು ಸಾಧನೆಯ ಮೂಲ .ವಿದ್ಯಾರ್ಥಿಗಳು ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಶ್ರದ್ದೆಯಿಂದ ಓದಿನಲ್ಲಿ ತೊಡಗಿಸಿಕೊಂಡಲ್ಲಿ ಸಾಧನೆಯ ಶಿಖರವನ್ನು ತಲುಪಬಹುದು,” ಎಂದರು.ಮ ಕ್ಕಳನ್ನುದ್ದೇಶಿಸಿ ಮಾತನಾಡಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಮೋಹನ್ ಪಿ. ಎಸ್ ಮಾತನಾಡಿ “ಕೋವಿಡ್ -19 ನಿಂದ ಉಂಟಾಗಿದ್ದ ಕ್ಲಿಷ್ಟಕರ ಸನ್ನಿವೇಶದ ನಡುವೆಯೂ ಎಸ್ .ಎಸ್ .ಎಲ್. ಸಿ. ವಿದ್ಯಾರ್ಥಿಗಳ ಸಾಧನೆ ಗಮನಾರ್ಹ.ಮುಂದೆಯೂ ಉತ್ತಮ ಸಾಧನೆಯೆಡೆ ನಿಮ್ಮ ಗಮನ ಕೇಂದ್ರೀಕೃತವಾಗಿರಲಿ “ಎಂದರು.ಶಾಲಾಮುಖ್ಯ ಶೈಕ್ಷಣಿಕಾಧಿಕಾರಿ ರವೀಂದ್ರ ಡಿ ಮಾತನಾಡಿ “ಶಿಕ್ಷಣ ಕೇವಲ ಅಂಕಗಳಿಗೆ ಗೆ ಮಾತ್ರ ಸೀಮಿತವಲ್ಲ ಬದಲಾಗಿ ನೀವು ಪಡೆದ ಶಿಕ್ಷಣ ನಿಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ವನ್ನು ಇಮ್ಮಡಿಗೊಳಿಸಬೇಕು. ನಿಮ್ಮಲ್ಲಿ ರುವ ಪ್ರತಿಭೆಯಿಂದ ನಿಮಗೆ ನೂರಾರು ಅವಕಾಶ ಗಳು ದೊರೆಯಬಹುದು,ಸೂಕ್ತವಾದುದನ್ನುಆರಿಸಿ ಭವಿಷ್ಯ ರೂಪಿಸಿಕೊಳ್ಳಿ “ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕರಾದ ಜೆ.ಪ್ರ ಹ್ಲಾದ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ದೊರೆಯುವ ಪುರಸ್ಕಾರ ವು ಮುಂದಿನ ಕಲಿಕೆಗೆ ಪ್ರೇರಣೆಯಾಗುತ್ತದೆ. ಮುಂದಿನ ವಿದ್ಯಾಭ್ಯಾಸದಲ್ಲಿ ಶ್ರಮವಹಿಸಿ ಏಕಾಗ್ರತೆಯಿಂದ ನಿಮ್ಮನ್ನು ನೀವು ತೊಡಗಿಸಿಕೊಂಡು ಭಾವೀ ಭವಿಷ್ಯವನ್ನು ಉ ಜ್ವಲ ವಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವೇದಿಕೆಯಲ್ಲಿ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಎಸ್. ನಾಯಕ್, ಟ್ರಸ್ಟಿಯಾದ ಪುಷ್ಪ ರಾಜ್ ಹೆಗ್ಡೆಶಾಲಾ ಶಿಕ್ಷಕ ರಕ್ಷಕ ಸಂಘದ ಸಂಘದ ಉಪಾಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಉಪಸ್ಥಿತರಿದ್ದರು.ಸಹಶಿಕ್ಷಕಿ ಸುಧಾ ಎನ್ ರಾವ್ ಸ್ವಾಗತಿಸಿ, ಮಂಜುಳ ಎಚ್. ಗೌಡ ವಂದಿಸಿದರು .ಸಹ ಶಿಕ್ಷಕಿಯರಾದ ಜಯಶ್ರೀ ಆಚಾರ್ಯ, ಲೀಲಾ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button