ಸುದ್ದಿ

ಕಲ್ಲುಗುಂಡಿಯ ತಾಜ್ ಟರ್ಲಿಯವರಿಗೆ ಗೌರವ ಡಾಕ್ಟರೇಟ್…

ಸುಳ್ಯ: ಕಲ್ಲುಗುಂಡಿ ಭಾಗದಲ್ಲಿ ಸುಮಾರು ಹದಿನೈದು ವರುಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುಳ್ಯ ತಾಲ್ಲೂಕಿನ ಸಂಪಾಜೆ ಗ್ರಾಮದ ಆಪತ್ಭಾಂಧವನೆಂದೇ ಖ್ಯಾತಿ ಪಡೆದ ತಾಜುದ್ಧೀನ್ ಟರ್ಲಿಯವರಿಗೆ *ಎಶಿಯಾ ವೇದಿಕ್ ಕಲ್ಚರಲ್ ಯೂನಿವರ್ಸಿಟಿ* ಚೆನ್ನೈ ಯಿಂದ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರು ಹೊರವಲಯದ ಹೊಸೂರಿನ ಕ್ಲಾರೆಷ್ಟಾ ಹೋಟೇಲಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು. ಪ್ರಸ್ತುತ ಹೋಟೇಲ್ ಉದ್ಯಮ ನಡೆಸುತ್ತಿರುವ ಇವರು ಗೂನಡ್ಕದ ತೆಕ್ಕಿಲ್ ಮನೆತನದ ಟರ್ಲಿ ಇಬ್ರಾಹಿಂ ಮತ್ತು ಕಲ್ಲುಗುಂಡಿ ಕಡೆಪಾಲದ ಸೊಸೈಟಿ ಮನೆತನದ ದೈನಾಬಿ ಯವರ ಮೂರನೇಯ ಪುತ್ರ.
ಇವರು ತುರ್ತು ಪರಿಸ್ಥಿತಿಯ, ಪ್ರಳಯ, ಭೂಕುಸಿತ, ಕೋವಿಡ್, ರಕ್ತದಾನ ಬಳಗ , ಅನಾಥ ಶವಗಳ ದಫನ ಕಾರ್ಯ, ಅಪಘಾತಗಳಿಗೆ ತುರ್ತು ಸ್ಪಂದನೆ, ಮುಂತಾದ ಕೆಲಸಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದರು.ಇವರು ಈ ಮೊದಲು ಪಡೆದ ಹಲವಾರು ಸಂಘ ಸಂಸ್ಥೆಯ ಪ್ರಶಸ್ತಿ ಗಳಿಗೆ ಭಾಜಕರಾಗಿದ್ದು ಅಲ್ಲದೆ ಯುವ ಶಕ್ತಿ ಕರ್ನಾಟಕ ಇದರ ರಕ್ತದಾನ ಬಳಗದ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಅಧ್ಯಕ್ಷರಾಗಿ ಅಲ್ಲದೆ ಹಲವಾರು ಸಂಘಟನೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಪ್ರಸ್ತುತ KMCC ಸುಳ್ಯ ತಾಲೂಕು ಇದರ ಪ್ರಧಾನ ಕಾರ್ಯದರ್ಶಿ,SKSSF ವಿಖಾಯ ಇದರ ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ಹಾಗೂ ಸುದ್ಧಿ ಬಿಡುಗಡೆಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ
ಅಣ್ಣ ಅಶ್ರಫ್ ಟರ್ಲಿ ಸದಸ್ಯರು SDPI ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ. ಇನ್ನೊರ್ವ ತಮ್ಮ ಸಮಾಜ ಸೇವೆ ತೊಡಗಿಕೊಂಡಿರುವ ಸಲೀಮ್ ಟರ್ಲಿ KMCC ಬೆಂಗಳೂರು.

 

 

Related Articles

Back to top button