ಸುದ್ದಿ

ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ – ಅಭಿಜ್ಞಾ ರಾವ್ ಗೆ ಅಭಿನಂದನೆ…

ಕಡಬ: ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು. ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ವಿಠಲ್ ರಾವ್ ರವರ ಪುತ್ರಿ ಕು. ಅಭಿಜ್ಞಾ ರಾವ್ ರವರಿಗೆ ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದಲ್ಲಿ ಆ. 3ರಂದು ಸನ್ಮಾನಿಸಿ ಗೌರವಿಸಲಾಯಿತು.
ಸುಬ್ರಹ್ಮಣ್ಯ ಪತ್ರಕರ್ತರ ಬಳಗ, ಕುಮಾರಸ್ವಾಮಿ ವಿದ್ಯಾಲಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ಪ್ರತ್ಯೇಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಲೋಕೇಶ್ ಬಿ.ಎನ್ ಯಜ್ಞೇಶ್ ಆಚಾರ್, ಚಂದ್ರಶೇಖರ ನಾಯರ್, ಗಣೇಶ್ ನಾಯರ್, ವಿದ್ಯಾರತ್ನ, ಶಿವರಾಮ ಏನೆಕಲ್ಲು, ಸೀತಾರಾಮ ಎಣ್ಣೆಮಜಲು, ದಿನೇಶ್ ಹಾಲೆಮಜಲು, ವಿಶ್ವನಾಥ ನಡುತೋಟ, ರವಿ ಕಕ್ಕೆಪದವು, ಎಚ್.ಎಲ್ ವೆಂಕಟೇಶ್, ಭರತ್ ನೆಕ್ರಾಜೆ, ಗೋಪಾಲ ಎಣ್ಣೆಮಜಲು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button