ಉತ್ತಮ ನಾಳೆಯ ನಿರೀಕ್ಷೆ ಮತ್ತು ಬದುಕಿನ ಮಾರ್ಗ …

ಉತ್ತಮ ನಾಳೆಯ ನಿರೀಕ್ಷೆ ಮತ್ತು ಬದುಕಿನ ಮಾರ್ಗ …

ಒಬ್ಬ ಶಿಷ್ಯನಿದ್ದ. ಪಾರಮಾರ್ಥದ ಹಸಿವು ಇತ್ತು ಅದಕ್ಕಾಗಿ ಗುರುವಿನಿಂದ ಮಾರ್ಗದರ್ಶನವನ್ನು ಪಡೆಯಬೇಕೆಂದು ಬಯಸಿದ ಅವನು-‘ ಗುರುವೇ ಎಲ್ಲಾ ರಸ್ತೆಗಳನ್ನು ಸುತ್ತಿ ಬಳಸಿ ಬುದ್ಧನ ಭೂಮಿಯತ್ತ ಸಾಗುತ್ತಿವೆ. ಒಂದು ರಸ್ತೆ ಮಾತ್ರ ನೇರವಾಗಿದೆ. ಅದು ನಿರ್ವಾಣದ ಬಾಗಿಲ ಹತ್ತಿರ ಕೊಂಡೊಯ್ಯುತ್ತದೆ. ದಯಮಾಡಿ, ಹೇಳಿ ಹಾದಿ ಎಲ್ಲಿಂದ ಆರಂಭವಾಗುತ್ತದೆ? ‘ಗುರುವಿನ ಕೈಯಲ್ಲಿ ಬೆತ್ತವಿತ್ತು. ಬೆತ್ತದ ಚೂಪಾದ ಭಾಗವನ್ನು ತನ್ನ ಮುಂದಿನ ನೆಲದಮೇಲೆ ನೇರವಾಗಿಟ್ಟು ಹೇಳಿದ ‘ಇಲ್ಲಿಂದಲೇ’ ಎಂದು.

ಒಂದು ಚಿಕ್ಕ ಕಥೆಯಷ್ಟೇ.ಈ ಕಥೆ ಕೊಡುವ ಸಂದೇಶ ಅತಿ ಮುಖ್ಯ. ನಾವೆಲ್ಲ ನಾಳೆಯ ಚಿಂತೆಯಲ್ಲಿ ಇರುವವರು ನಾಳೆಗಾಗಿ ಎಂತೆಂಥದೋ ಕನಸುಗಳನ್ನು ಕಟ್ಟಿಕೊಂಡವರು. ಕನಸುಗಳನ್ನು ಕಾಣುವುದರಿಂದ ನಾಳೆಯ ಭವಿಷ್ಯ ನಿರ್ಮಾಣವಾಗುವುದಿಲ್ಲ. ಬೆಳಗಿನ ಜಾವ ಬಿದ್ದ ಕನಸುಗಳು ಸತ್ಯವಾಗುತ್ತದೆ. ಎಂದು ಕೆಲವರು ಭಾವಿಸುತ್ತಾರೆ. ಇಷ್ಟೊಂದು ಕನಸುಗಳು ಬಿದ್ದಿವೆಯಲ್ಲಾ !ಬಿದ್ದ ಕನಸುಗಳೆಲ್ಲ ನನಸಾಗಿವೆ? ನನಸಾಗಲು ಸಾಧ್ಯವಿಲ್ಲ. ಕನಸು ಕನಸೇ, ಕನಸೇನೋ ಸತ್ಯವಲ್ಲ. ಅದು ಒಂದು ತೀವ್ರವಾದ ಭಾವನೆಯೇ ಕನಸಾಗುತ್ತದೆ. ‘ಕನಸುಗಳನ್ನು ಕಾಣುವುದಕ್ಕಿಂತ ಕನಸುಗಳನ್ನು ಕಟ್ಟಬೇಕಾಗುತ್ತದೆ ಕಟ್ಟಿದ ಕನಸನ್ನು ನನಸಾಗಿಸಲು ಸತತ ಪ್ರಯತ್ನ ಮಾಡಬೇಕಾಗುತ್ತದೆ.’ ನಮ್ಮ ನಾಳೆ ನಾಳೆ ಏನು ಬೇರೆಯವರಿಂದ ನಿರ್ಮಾಣವಾಗುವುದಿಲ್ಲ ದೇವರಾಗಲಿ, ಜ್ಯೋತಿಷ್ಯ ವಾಗಲಿ, ಮಂತ್ರವಾದಿಗಳಲಿ, ಉತ್ತಮ ನಾಳೆಯನ್ನು ಕಟ್ಟಿ ಕೊಡಲಾರರು. ನಮ್ಮ ಅಂಗೈಯೊಳಗಿನ ರೇಖೆಗಳನ್ನು ನೋಡುತ್ತಾ ಉತ್ತಮ ನಾಳೆಗಾಗಿ ಕಾಯುತ್ತಾ ಕೂರಬಾರದು ಒಬ್ಬ ದರಿದ್ರನು ಕೈಯಲ್ಲಿ ರೇಖೆಗಳು ಸ್ಪಷ್ಟವಾಗಿರುತ್ತದೆ. ಹಾಗಾದರೆ ಅವನೇಕೆ ಏನನ್ನು ಸಾಧಿಸಲಿಲ್ಲ? ಅವನು ಬೇರೆಯವರಂತೆ ಕನಸುಗಳನ್ನು ಕಂಡಿದ್ದ ಆದರೆ ಅವುಗಳನ್ನು ಸಾಕಾರಗೊಳಿಸಿಕೊಳ್ಳಲು ಮರೆತಿದ್ದ ಆದ್ದರಿಂದ ಅವನು ದರಿದ್ರನಾಗಿ ಉಳಿದ. ನಾಳೆಗೆ ಇಂದಿನ ಸಿದ್ಧತೆ ಬೇಕು ನಾಳೆ-ನಾಡಿದ್ದು ಎಂದು ಮುಂದೂಡುವಂತಿಲ್ಲ ಈಗಾಗಲೇ ಕಾಲಚಕ್ರ ವೇಗವಾಗಿ ಉರುಳುತ್ತಿತ್ತು ನಾಳೆಯನ್ನು ಕುರಿತು ನಾವೆಲ್ಲಾ ಬಹಳ ತಡವಾಗಿ ಚಿಂತಿಸುತ್ತಿದ್ದೇವೆ ಅನಿಸುತ್ತದೆ ಕಾಲಚಕ್ರದ ಸಂಗಡ ಕೊಡಬೇಕಾಗುತ್ತದೆ ಹಾಗಾಗದಿದ್ದಲ್ಲಿ ಕಾಲ ಓಡುತ್ತದೆ
ನಾವುಇದ್ದಲೇ ಉಳಿಯುತ್ತೇವೆ. ಉತ್ತಮ ನಾಳೆಯನ್ನು ಗುರುತಿಸುವವರು ಇದ್ದಲ್ಲಿಂದಲೇ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಯಾರಿಗಾಗಿಯೂ ಕಾಲ ಕಾಯುವುದಿಲ್ಲ. ಎಲ್ಲರೂ ಕಾಲದ ಸಂಗಡ ಮಾಡಬೇಕಾಗುತ್ತದೆ. ಅವರವರ ದಾರಿಯನ್ನು ಅವರೇ ಹುಡುಕಿಕೊಳ್ಳಬೇಕು ಅದಕ್ಕಾಗಿ ಇನ್ನೊಬ್ಬರು. ಎದುರಿಗೆ ಬಂದವರನ್ನು ಕೈಗೆ ಸಿಕ್ಕಿದವರನ್ನು ಮನಸ್ಸಿಗೆ ಸ್ಪಂದಿಸಿದವರನ್ನು ಕೇಳಿ ತಿಳಿದುಕೊಂಡು. ದಾರಿ ಯಾವುದೆಂದು ಕಂಡುಕೊಳ್ಳಬೇಕು. ಅದುವೇ ಸ್ವಂತಿಕೆ ಅದುವೇ ಬದುಕಿನ ಮಾರ್ಗ.

 

 

 

ಬರಹ:ವಿದ್ಯಾ ಶ್ರೀ ಬಿ.
ಬಳ್ಳಾರಿ

Sponsors

Related Articles

Leave a Reply

Your email address will not be published. Required fields are marked *

Back to top button