ಸುದ್ದಿ

ಗೂನಡ್ಕಕ್ಕೆ ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಭೇಟಿ…

ಸುಳ್ಯ: ಕೆ.ಪಿ.ಸಿ.ಸಿ.ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಅಧ್ಯಕ್ಷ ಮತ್ತು ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣರವರು ಸಂಪಾಜೆ ಗ್ರಾಮದ ಗೂನಡ್ಕಕ್ಕೆ ನ. 22 ರಂದು ಭೇಟಿ ನೀಡಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕರವರ ಕಚೇರಿಯಲ್ಲಿ ನಡೆದ ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.
ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕರವರು ಸಂಪಾಜೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ ಇದು ಎಲ್ಲಾ ಚುನಾವಣೆಗಳಲ್ಲಿಯೂ ಸಾಬೀತಾಗಿದೆ.ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು 14 ರಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಗುರಿಯನ್ನು ಇಟ್ಟುಕೊಂಡು ನಾವು ಕಾರ್ಯನಿರ್ವಹಿಸಲಿದ್ದೇವೆ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್.ಪೂನ್ನಣ್ಣರವರು “ಕಾಂಗ್ರೆಸ್ ಪಕ್ಷವನ್ನು ಪ್ರಸ್ತುತ ಸನ್ನಿವೇಶದಲ್ಲಿ ತಳಹಂತದಿಂದ ಗಟ್ಟಿಗೊಳಿಸಬೇಕಾದ ಅನಿರ್ವಾಯತೆ ಇದೆ. ಆ ಕಾರ್ಯವನ್ನು ಸಂಪಾಜೆ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.ಆ ಕಾರಣದಿಂದ ಇಲ್ಲಿ ಪಕ್ಷ ಬಲಿಷ್ಠವಾಗಿದೆ.ಮುಂದೆಯೂ ಇನ್ನಷ್ಟು ಸದೃಢವಾಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಲಿ” ಎಂದು ಹಾರೈಸಿದರು.
ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ರವರು ಮಾತನಾಡಿ “ತಳಹಂತದ ಕಾರ್ಯಕರ್ತರಿಗೆ ಪ್ರಾಮುಖ್ಯತೆ ಸಿಗಬೇಕೇ ಹೊರತು ಪಕ್ಷಕ್ಕೆ ಅಧಿಕಾರ ಸಿಕ್ಕಾಗ ಮಾತ್ರ ಬರುವ ನಾಯಕರಿಗಲ್ಲ” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಂಗಾಜೆಯವರು, ಸಂಪಾಜೆ ಗ್ರಾಮದಲ್ಲಿ ನಾವು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಪಕ್ಷದ ಹಿತಕ್ಕಾಗಿ ದುಡಿದಿದ್ದೇವೆ.ಮುಂದೆಯೂ ಕೂಡ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಲಿದ್ದೇವೆ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ,ಕೊಡಗು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಹಾಂ , ಪ್ರಮುಖರಾದ ಮೋಹಿನಿ ವಸಂತ ಗೌಡ ಪೆಲ್ತಡ್ಕ , ಮಹಮ್ಮದ್ ಕುಂಞ ಗೂನಡ್ಕ, ದಿನಕರ ಗೌಡ ಸಣ್ಣಮನೆ, ಧರ್ಮಪಾಲ ಕೊಯಂಗಾಜೆ, ಜಿ.ಕೆ.ಹಮೀದ್, ಸುರಯ್ಯಾ, ಸೂರಜ್ ಹೊಸೂರು, ಎಸ್.ಪಿ.ಹನೀಫ್, ತಾಜ್ ಮಹಮ್ಮದ್, ಪುಟ್ಟಯ್ಯ ಗೌಡ, ಎಸ್.ಕೆ.ಹನೀಫ್, ಬಾಲಚಂದ್ರ, ತಾಜುದ್ದೀನ್ ಅರಂತೋಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ.ಕೆ.ಅಬೂಸಾಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ವರದಿ:ತಾಜುದ್ದೀನ್ ಅರಂತೋಡು

Related Articles

Leave a Reply

Your email address will not be published.

Back to top button