ಸುದ್ದಿ

ಸುಳ್ಯ- ಕೆರೆಮೂಲೆ ವಾರ್ಡಿನಲ್ಲಿ ಕಾಂಕ್ರೀಟ್ ರಸ್ತೆಯ ಉದ್ಘಾಟನೆ…

ಸುಳ್ಯ: ನಗರದ ಕೆರೆಮೂಲೆ ವಾರ್ಡಿನಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ವಾರ್ಡಿನ ಸದಸ್ಯರಾದ ಎಂ.ವೆಂಕಪ್ಪ ಗೌಡ ಅವರು ಇಂದು(ಸೋಮವಾರ) ಉದ್ಘಾಟಿಸಿದರು.
ಈ ಸಮಯ ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ಗುತ್ತಿಗೆದಾರ ನಿತ್ಯಾನಂದ ಆಲೆಟ್ಟಿ, ಸ್ಥಳೀಯರಾದ ಮಸೂದ್, ನೌಶಾದ್ ಬಾರ್ಪಣೆ, ಕುಮಾರ್ ನಾಗಪಟ್ಟಣ, ಪ್ರತೀಶ್ ಸೋಣಂಗೇರಿ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button